LOCAL NEWS : ಜನರ ಜೀವದ ಜೊತೆ ಚೆಲ್ಲಾಟ ಸರಿಯಲ್ಲ; ರಾಮು ಪೂಜಾರ ಆಕ್ರೋಶ.!!
ಕಲುಷಿತ ನೀರು ಪೂರೈಕೆ: ಅನಾರೋಗ್ಯದ ಭೀತಿ..!!
ಕೊಪ್ಪಳ : ನಗರದ ವಡ್ಡರ ಓಣಿಯಲ್ಲಿ ಕಲುಷಿತ ನೀರು ಪೂರೈಕೆಯಿಂದಾಗಿ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಜನರ ಜೀವದ ಜೊತೆ ನಗರಸಭೆ ಅಧಿಕಾರಿಗಳ ಚೆಲ್ಲಾಟ ಸರಿಯಲ್ಲ ಎಂದು ರಾಮು ಪೂಜಾರ ಆಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ನಗರದ ವಡ್ಡರ ಓಣಿಯಲ್ಲಿ ಬೆಳಗ್ಗೆ ನಗರಸಭೆ ವತಿಯಿಂದ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಕಲುಷಿತ ನೀರು ಪೂರೈಕೆ ಆದ ಹಿನ್ನೆಲೆ ನಗರಸಭೆ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡು ನಂತರ ಸುದ್ದಿಗಾರರೊಂದಿಗೆ ವಡ್ಡರ ಓಣಿಯ ಭೋವಿ ಸಮಾಜದ ಯುವ ಮುಖಂಡ ರಾಮು ಪೂಜಾರ ಮಾತನಾಡಿ, ನಮ್ಮ ಓಣಿಯಲ್ಲಿ ಒಂದೆಡೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದೆ. ಇನ್ನೊಂದು ಕಡೆ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ನೀರು ನಿರ್ವಹಣೆಯ ಪೈಪ್ ಒಡೆದು ಚರಂಡಿಯ ಕಲುಷಿತ ನೀರು ಮಿಶ್ರಣವಾಗುತ್ತಿದೆ. ಇದೇ ನೀರು ಕುಡಿಯುವುದಕ್ಕೆ ಪೂರೈಕೆಯಾಗುತ್ತಿದೆ. ಹೀಗಾಗಿ ಜನಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ಕೊಪ್ಪಳ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ.ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಬಗ್ಗೆ ನಗರಸಭೆ ಅಧ್ಯಕ್ಷರು ಕ್ರಮ ಕೈಗೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಕೊಪ್ಪಳದ ಎಲ್ಲಾ ವಾರ್ಡ್ ಗಳಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ನಗರ ಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರ ಜೀವದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ವಾಟರ್ ಮ್ಯಾನ್ ಸಿಬ್ಬಂದಿಯನ್ನ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ಜರಗಿತು.