LOCAL NEWS : ಪೋಲಿಸ್ ಇಲಾಖೆಯಿಂದ ಕಂಪ್ಲಿ ನಗರದಲ್ಲಿ 38 ಸಿಸಿ ಕ್ಯಾಮೆರಾಗಳು ಅಳವಡಿಕೆ..!

You are currently viewing LOCAL NEWS : ಪೋಲಿಸ್ ಇಲಾಖೆಯಿಂದ ಕಂಪ್ಲಿ ನಗರದಲ್ಲಿ 38 ಸಿಸಿ ಕ್ಯಾಮೆರಾಗಳು ಅಳವಡಿಕೆ..!

LOCAL NEWS : ಕಂಪ್ಲಿ ನಗರದಲ್ಲಿ 38 ಸಿಸಿ ಕ್ಯಾಮೆರಾಗಳು ಅಳವಡಿಕೆ..!

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ (ಕಂಪ್ಲಿ) : ಅಪರಾಧ ಮತ್ತು ಅಪಘಾತ ಪತ್ತೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಕಂಪ್ಲಿ ತಾಲೂಕು ಪೊಲೀಸ್ ಇಲಾಖೆಯಿಂದ ಪ್ರಮುಖ ರಸ್ತೆ ಮತ್ತು ನಗರಗಳಲ್ಲಿ ನಿಗಾವಹಿಸಲು 17 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ 38 ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಮೂಲಕ ಇಡೀ ನಗರದ ಮೇಲೆ ಪೋಲಿಸ್ ಇಲಾಖೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.

ಇಡೀ ನಗರದಲ್ಲಿನ ನಾಗರಿಕರ ಸುರಕ್ಷತೆ ಮತ್ತು ಕಾನೂನು- ಸುವ್ಯವಸ್ಥೆ ವ್ಯವಸ್ಥೆ ಬಲಪಡಿಸಲು ಜೊತೆಗೆ ಯಾವುದೇ ಅಪರಾಧ ಚಟುವಟಿಕೆ ನಡೆಯದಂತೆ ತಡೆಹಿಡಿಯಲು ಸಿಸಿಟಿವಿ ಕ್ಯಾಮರಾ ಕಣ್ಣಾವಲಿನಲ್ಲಿ ಇಡಲು ಪೋಲಿಸ್ ಇಲಾಖೆಯ ಮಹತ್ವದ ಹೆಜ್ಜೆಯನ್ನಿರಿಸಿದ್ದು ಕಂಪ್ಲಿ ನಗರದಲ್ಲಿನ ಸಾರ್ವಜನಿಕರಿಂದ ಹರ್ಷವ್ಯಕ್ತವಾಗುತ್ತಿದೆ.

ಎಲ್ಲೆಲ್ಲಿ ಹೊಸ ಸಿಸಿ ಕ್ಯಾಮರಾ ಅಳವಡಿಕೆ: , ಅಂಬೇಡ್ಕರ್ ಸರ್ಕಲ್ ವಾಲ್ಮೀಕಿ ಸರ್ಕಲ್ ಹೌಸಿಂಗ್ ಬೋರ್ಡ್ ಕೃಷಿ ತರಬೇತಿ ಕೇಂದ್ರ ರಸ್ತೆ ಕಂಪ್ಲಿ ತುಂಗಭದ್ರಾ ಸೇತುವೆ ಹತ್ತಿರ ಹೊಸ ಬಸ್ ನಿಲ್ದಾಣ ಹತ್ತಿರ ಉದ್ವ ಗಣಪತಿ ದೇವಸ್ಥಾನ ಹತ್ತಿರ ನಡುಲ್ ಮಸೀದಿ ಹತ್ತಿರ ಸರ್ಕಾರಿ ಆಸ್ಪತ್ರೆ ಹತ್ತಿರ ಮಾರಮ್ಮ ದೇವಸ್ಥಾನ ಹತ್ತಿರ ಸಾಯಿಬಾಬಾ ಗುಡಿ ದೇವಸ್ಥಾನ ರಸ್ತೆ ಕಂಪ್ಲಿ ನಗರದ ವಿವಿಧಡೆ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿದ್ದಾರೆ.

ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಹೊಸದಾಗಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿರುವ ಕಂಪ್ಲಿ ಪುರಸಭೆ ಮತ್ತು ಪೊಲೀಸ್ ಇಲಾಖೆ ಒಳ್ಳೆಯ ನಿರ್ಧಾರ ಕೆಲವು ಪ್ರಮುಖ ಸರ್ಕಲ್‌ಗಳಲ್ಲಿ ಪ್ರತಿಭಟನೆ ಆಗುತ್ತವೆ ಅಲ್ಲಿ ಕಿಡಿಗೇಡಿಗಳ ಕಿಡಿಗೇಡಿತನ ನಡೆಯುವುದಿಲ್ಲ. ಭಯ ಕಾಡುತ್ತದೆ ಇದರಿಂದ ಸಾರ್ವಜನಿಕರಿಗೆ ಸುರಕ್ಷಿತವಾಗಿದೆ.

ನಮ್ಮ ಕಂಪ್ಲಿ ತಾಲೂಕಿನಲ್ಲಿ ಗಣೇಶ ಹಬ್ಬದಲ್ಲೇ ಯಾವುದೇ ರೀತಿ ಗಲಾಟೆ ಗಲಾಟೆ ಆಗಬಾರದು ಒಂದು ವೇಳೆ ಆದಲ್ಲಿ ನಮ್ಮ ಪೊಲೀಸ್ ಇಲಾಖೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತೆ ಕಂಪ್ಲಿ ನಗರದ ವಿವಿಧಡಿಯಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಪರಾಧ ಮತ್ತು ರಸ್ತೆ ಅಪಘಾತ ಕಾನೂನು ಬಾಹಿರ ಚಟುವಟಿಕೆಗಳು ರಸ್ತೆ ಸಂಚಾರ ಉಲ್ಲಂಘನೆ ನಡೆದರೆ, ಅದನ್ನು ನಮ್ಮ ಪೋಲಿಸ್ ಇಲಾಖೆಯಿಂದ ಪತ್ತೆ ಹಚ್ಚಲು ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ನಾವು ನಗರದಲ್ಲಿ ಪ್ರಮುಖ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ಹೊಸ 38 ಸಿಸಿ ಕ್ಯಾಮರಾ ಅಳವಡಿಸಲಾಗುತ್ತಿದೆ ಇದರಿಂದ ಸಾರ್ವಜನಿಕರಿಗೂ ಕೂಡ ಅನುಕೂಲವಾಗುತ್ತದೆ.

ಕೆ.ಬಿ. ವಾಸ್ ಕುಮಾರ್
ಪೊಲೀಸ್ ಇನ್ಸ್ಪೆಕ್ಟರ್, ಕಂಪ್ಲಿ.

Leave a Reply

error: Content is protected !!