ಕೊಪ್ಪಳ : ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಬಿ.ಕೆ ರವಿ ಅವರನ್ನು “ರಾಷ್ಟ್ರೀಯ ಸಂವಹನ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ”ರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
“ರಾಷ್ಟ್ರೀಯ ಸಂವಹನ ಕಾಂಗ್ರೆಸ್” ಸಂಘಟನೆಯಲ್ಲಿ ದೇಶದ ಮಾಧ್ಯಮ ವಿದ್ವಾಂಸರು, ಸಂವಹನ ತಜ್ಞರು, ಮಾಧ್ಯಮ ಶಿಕ್ಷಕರು, ಸಂಶೋಧಕರು, ಭಾರತೀಯ ಮಾಧ್ಯಮದ ವೃತ್ತಿಪರರನ್ನು ಒಳಗೊಂಡಿದ್ದು, ಈ ಬಗ್ಗೆ ರಾಷ್ಟ್ರಾಧ್ಯಂತ ಮಾಧ್ಯಮಕ್ಕೆ ಸಂಬಂಧಿಸಿದ ವಿಚಾರ ಸಂಕೀರಣ ಸಂಶೋಧನಾ ಪ್ರಕಟಣೆಗಳು, ತರಬೇತಿ, ಸಮ್ಮೇಳನ ಹಾಗೂ ಸಂಶೋಧನೆಯಂತ ಕಾರ್ಯನಿರ್ವಹಿಸುತ್ತದೆ.
ಕೋಲ್ಕತ್ತಾ ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾನಿಲಯದಲ್ಲಿ ಕೇಂದ್ರ ಸ್ಥಾನ ಹೊಂದಿರುವಂತ ಎನ್‌ಸಿಸಿಯ ಅಧ್ಯಕ್ಷರಾಗಿ ವಿಶ್ವಭಾರತಿ ವಿವಿಯ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿಪ್ ಲ್ಯಾಬ್ ಲೋಹಾ ಚೌಧುರಿ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಮಕನ್ ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿವಿಯ ಕುಲಪತಿ ಡಾ.ಕೆಜಿ ಸುರೇಶ್, ಅದೇ ರೀತಿ ಮಹಾ ಪ್ರಾಧಾನ ಕಾರ್ಯದರ್ಶಿಯಾಗಿ ಭುವನೇಶ್ವರ ಉಕ್ಕಲ್ ವಿವಿಯ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶ ಪ್ರೊ.ಉಪೇಂದ್ರ ಪಾಡಿ ಚುನಾಯಿತರಾಗಿದ್ದಾರೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿದೆ.
“ಇಡೀ ದೇಶದ ಮಾಧ್ಯಮದ ಶೈಕ್ಷಣಿಕ ಹಿತದೃಷ್ಠಿಯಿಂದ ಎಲ್ಲಾ ಮಾಧ್ಯಮಗಳ ಉದ್ಯಮದ ಮುಖ್ಯಸ್ಥರು ಹಾಗೂ ದೇಶದ ಮಾಧ್ಯಮದ ಶಿಕ್ಷಕರ ಇರುವ ಬಹು ಮುಖ್ಯ ರಾಷ್ಟೀಯ ಸಂಸ್ಥೆ, ಮಾಧ್ಯಮದ ಶಿಕ್ಷಣ ಹಾಗೂ ಮಾಧ್ಯಮ ಉದ್ಯಮಗಳ ನಡುವೆ ಒಳ್ಳೆಯ ಸೌಹಾರ್ದ ಹಾಗೂ ಭಾರತದ ಮಾಧ್ಯಮದ ಉದ್ಯಮವನ್ನು ಬಲಪಡಿಸುವ ಸಲುವಾಗಿ ಆರಂಭವಾಗಿರುವ ಸಂಸ್ಥೆ. ಇದಕ್ಕೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ನನಗೆ ಈ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷ ಸ್ಥಾನದ ಅವಕಾಶ ಸಿಕ್ಕಿದ್ದು, ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ದೇಶದ ಮಾಧ್ಯಮ ಶಿಕ್ಷಣದ ಕೇತ್ರಕ್ಕೆ ಒಳ್ಳೆಯ ಕೆಲಸ ಮಾಡಲು ಉತ್ಸುಕನಾಗಿದ್ದೇನೆ”
ಪ್ರೋ. ಬಿ.ಕೆ ರವಿ
ಕುಲಪತಿ, ಕೊಪ್ಪಳ ವಿಶ್ವವಿದ್ಯಾನಿಲಯ, ಕೊಪ್ಪಳ
ಹಾಗೂ
“ರಾಷ್ಟ್ರೀಯ ಸಂವಹನ ಕಾಂಗ್ರೆಸ್”ನ ಕಾರ್ಯಕಾರಿ ಅಧ್ಯಕ್ಷ