ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಅಡೂರು ಗ್ರಾಮದ ಶ್ರೀ ವೀರಭದ್ರೇಶ್ವರ ಕಾರ್ತಿಕ ಮಹೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದಲ್ಲಿ ಅವಳಿ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 NEWS EXPRESS : ಬಂಪರ್ ಕೊಡುಗೆ : ಯಲಬುರ್ಗಾ ಕ್ಷೇತ್ರಕ್ಕೆ 25 ಕೋಟಿ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್..!
ಹೆಚ್ಚಿನ ಸುದ್ದಿಗಾಗಿ ಕ್ಲಿಕ್ ಮಾಡಿ….👉 BIG NEWS : ಶಾಸಕ ಬಸವರಾಜ ರಾಯರೆಡ್ಡಿ ವಿರುದ್ದ ಅಕ್ರೋಶ ಹೊರಹಾಕಿದ ನವೀನ್ ಗುಳಗಣ್ಣನವರ್..!
ಕಾರ್ತಿಕ ಮಾಸದ ಪ್ರಯುಕ್ತ ವೀರಭದ್ರೇಶ್ವರ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ನಡೆದ ಶ್ರೀ ಶರಣ ಬಸವೇಶ್ವರ ಪುರಾಣವು ಡಿ. 12ರಂದು ಮಹಾಮಂಗಲ ಗೊಳ್ಳಲಿದೆ. ಈ ಪ್ರಯುಕ್ತ ಗ್ರಾಮದಲ್ಲಿ ಕುಂಭೋತ್ಸವ. ಹಾಗೂ ಡಿ.13 ರಂದು ಬೆಳ್ಳಗ್ಗೆ ಅದ್ಧೂರಿಯಾಗಿ ಪುರವಂತಿಕೆ ಜೊತೆಗೆ ಪಲ್ಲಕ್ಕಿ ಉತ್ಸವದ ನಡೆಯಲಿದೆ, ನಂತರ ಮಹಾ ಪ್ರಸಾದ ಇರುತ್ತದೆ. ಸಂಜೆ 5.30ಕ್ಕೆ ಮಹಾರಥೋತ್ಸವ ಜರಗಲಿದೆ.
ಈ ಪ್ರಯುಕ್ತವಾಗಿ ಡಿ.13 ರಂದು ರಾತ್ರಿ 10: 30ಕ್ಕೆ “ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ” ಹಾಗೂ ಡಿ.14 ರಂದು ಕಲಿಯುಗದಲ್ಲಿ ಘರ್ಜಿಸಿದ ಕರ್ಣಾಜುನರು” ಎಂಬ ಸುಂದರ ಸಾಮಾಜಿಕ ನಾಟಕಗಳು ಪ್ರದರ್ಶಗೊಳ್ಳಲಿವೆ.