ಕೊಪ್ಪಳ : ಜಿಲ್ಲೆಯ ಜೀವನಾಡಿ ತುಂಗಭದ್ರಾ ಆಣೆಕಟ್ಟಿ ನ 19 ನೇ ಗೇಟ್ ನ ಚೈನ್ ಲಿಂಕ್ ತುಂಡಾಗಿ ನೂರಾರು ಕೂಸೆಕ್ಸ್ ನೀರು ವೃಥಾ ಪೋಲಾಗುತ್ತಿದೆ, ಇದಕ್ಕೆಲ್ಲಾ ಆಡಳಿತ ಪಕ್ಷವೇ ಕಾರಣ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಸರ್ಕಾರದ ನಿರ್ಲಕ್ಷಕ್ಕೆ ಕಿಡಿಕಾರಿದ್ದಾರೆ.
ಇಂದು ಭಾನುವಾರ ತುಂಗಭದ್ರಾ ಆಣೆಕಟ್ಟು ಪ್ರದೇಶದ ಗೇಟ್ ನ ಚೈನ್ ಲಿಂಕ್ ಕಟ್ಟಾಗಿ ಆಗಿರುವ ಅವಾಂತರವನ್ನು ವೀಕ್ಷಿಸಿ ಬಳಿಕ ಅವರು ಮಾತನಾಡಿದರು.
ನಿನ್ನೆ ತಡರಾತ್ರಿ ನಮ್ಮ ಭಾಗದ ಜೀವನಾಡಿ ತುಂಗಭದ್ರಾ ಆಣೆಕಟ್ಟಿನ ಗೇಟ್ ನಂ-19ರ ಚೈನ್ ಲಿಂಕ್ ತುಂಡಾಗಿರುವ ಕಾರಣ ನದಿಗೆ ಅಪಾರ ಪ್ರಾಮಾಣದ ನೀರನ್ನೂ ಹರಿಸಲಾಗುತ್ತಿದೆ.
ಇಂದು ತುಂಗಭದ್ರಾ ಡ್ಯಾಮಗೆ ಭೇಟಿ ನೀಡಿ ಸದ್ಯದ ಪರಸ್ಥಿತಿಯನ್ನು ನೋಡಲಾಯಿತು, ಪರಸ್ಥಿತಿ ಚೆನ್ನಾಗಿದ್ದು ಯಾರು ಆತಂಕ ಪಡುವ ಅಗತ್ಯವಿಲ್ಲಾ ಸಾದ್ಯವಾದಷ್ಟು ನದಿಯ ಅಕ್ಕ ಪಕ್ಕದ ಗ್ರಾಮದವರು ತಮ್ಮ ಸುರಕ್ಷತೆಯಲ್ಲಿ ತಾವು ಇರಲು ಮನವಿ ಮಾಡುತ್ತೇನೆ ಹಾಗೂ ಸಿಬ್ಬಂದಿ ವರ್ಗದವರ ಜೊತೆಗೆ ದುರಸ್ತಿ ಬಗ್ಗೆ ಚರ್ಚೆ ಮಾಡಿದ ನಂತರ 4 ರಿಂದ 5 ದಿನಗಳಲ್ಲಿ ಗೇಟ್ ದುರಸ್ತಿಯನ್ನು ಸರಿಪಡಿಸುವ ಭರವಸೆಯನ್ನು ಸಿಬ್ಬಂದಿ ವರ್ಗ ನೀಡಿದೆ.
ಸದ್ಯ 105 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗೇಟ್ ಸಂಖ್ಯೆ 19 ರಿಂದ 35 ರಿಂದ 45 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಉಳಿದ ಗೇಟ್‌ಗಳಿಂದ ಸುಮಾರು 75 ಸಾವಿರ ಕ್ಯುಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ರೆ ಮಾತ್ರವೇ ಗೇಟ್‌ಗೆ ಏನಾಗಿದೆ ಎಂಬುದನ್ನ ನೋಡೋದಕ್ಕೆ ಸಾಧ್ಯ ಎಂಬುವ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಕಷ್ಟವನ್ನು ಅರಿಯದ ಬೇಜವಾಬ್ದಾರಿ ಅಧಿಕಾರಿಗಳು, ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿದಿನಗಳ ನಿಷ್ಕಳಜಿಯಿಂದಾಗಿ ಇಷ್ಟೊಂದು ಪ್ರಮಾಣದ ನೀರು ಹರಿದು ವೆಸ್ಟ್ ಆಗುತ್ತಿದೆ ಎಂದು ಹಾಲಪ್ಪ ಆಚಾರ್ ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಮಾಜಿ ಸಚಿವರಾದ ಹಾಲಪ್ಪ ಆಚಾರ,ಬಳ್ಳಾರಿ ವಿಭಾಗ ಸಹ ಪ್ರಭಾರಿಗಳಾದ ಚಂದ್ರಶೇಖರ ಪಾಟೀಲ್ ಹಲಗೇರಿ, ಕೊಪ್ಪಳ ಲೋಕಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಡಾಕ್ಟರ್ ಬಸವರಾಜ, ಕೊಪ್ಪಳ ಗ್ರಾಮಾಂತರ ಮಂಡಲದ ಅಧ್ಯಕ್ಷ ಪ್ರದೀಪ್ ಹಿಟ್ನಾಳ ಹಾಗೂ ಇತರರು ಉಪಸ್ಥಿತರಿದ್ದರು.