LOCAL NEWS : ಕ್ಷೇತ್ರದ ರೈತರಿಗೆ ಆರ್ಥಿಕ ಸಂಕಷ್ಟ : ಕನಿಷ್ಠ ಬೆಂಬಲ ಬೆಲೆ ಒದಗಿಸುವಂತೆ ಸಚಿವರಿಗೆ ಪತ್ರದ ಬರೆದ ಶಾಸಕ ರಾಯರೆಡ್ಡಿ..!!
ಕುಕನೂರು : ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ವ್ಯಾಪ್ತಿಯ ಹಳ್ಳಿಗಳು ಸಂಪೂರ್ಣ ಮಳೆಯಾಧಾರಿತ ಕೃಷಿ ಪ್ರದೇಶಗಳಾಗಿದ್ದು, ಈ ಪ್ರದೇಶಗಳಲ್ಲಿ ರೈತರು ಮುಂಗಾರಿನ ಪ್ರಮುಖ ಬೆಳೆಯಾಗಿ ಮೆಕ್ಕೆ ಜೋಳ ಬೆಳೆಯನ್ನು ಅತೀ ಹೆಚ್ಚಾಗಿ ಬೆಳೆಯುತ್ತಾರೆ.
ಈ ವರ್ಷವೂ ಕೂಡ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಯಲಬುರ್ಗಾ ತಾಲ್ಲೂಕಿನಲ್ಲಿ ಸುಮಾರು 20,531 ಹೆಕ್ಟೇರ್ ಮತ್ತು ಕುಕನೂರು ತಾಲ್ಲೂಕಿನಲ್ಲಿ 12,956 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆ ಜೋಳ ಬೆಳೆದಿದ್ದಾರೆ. ಆದರೆ, ಕೆಲವು ಪ್ರದೇಶಗಳಲ್ಲಿ ಮಾತ್ರ ಮುಂಗಾರು ಉತ್ತಮವಾಗಿದ್ದು, ಇನ್ನುಳಿದ ಕಡೆ ಸಾಧಾರಣವಾಗಿದೆ. ಹೀಗಾಗಿ ರೈತರಿಗೆ ಮೆಕ್ಕೆ ಜೋಳ ಫಸಲು ನಿರೀಕ್ಷಿಸಿದ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಂದಿದೆ ಎಂದು ರೈತರರ ಅಭಿಪ್ರಾಯವಾಗಿದೆ.
ರೈತರು ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬ ಮೊದಲು 2,350 ರೂ. ಬಳಿಕ 2,300 ರೂ. ಇಳಿಕೆ, ಪ್ರಸ್ತುವಾಗಿ ಮಾರುಕಟ್ಟೆಯಲ್ಲಿ 2,250 ರೂ ಇದೆ ಎಂದು ತಿಳಿದು ಬಂದಿದೆ. ಈ ರೀತಿಯಲ್ಲಿ ಮಾರುಕಟ್ಟೆ ದರ ಇರುವುದರಿಂದ ಮೆಕ್ಕೆ ಜೋಳ ಮಾರಲು ಹೋದಾಗ ಮಾರುಕಟ್ಟೆ ದರ ಕುಸಿದಿರುವುದು ಕಂಡು ಬಂದಿರುವುದರಿಂದ ರೈತರೆಲ್ಲರೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಶಾಸಕ ಬಸರಾಜ ರಾಯರೆಡ್ಡಿ ಅವರಿಗೆ ಅವಳಿ ತಾಲೂಕಿನ ರೈತರು ಅಹವಾಲುಗಳನ್ನು ಹೇಳಿಕೊಂಡಿದ್ದಾರೆ. ಸರ್ಕಾರದಿಂದ ಘೋಷಣೆಯಾದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮೆಕ್ಕೆ ಜೋಳವನ್ನು ಖರೀದಿಸಬೇಕೆಂದು ಶಾಸಕರಿಗೆ ಕ್ಷೇತ್ರದ ರೈತರೆಲ್ಲರೂ ಒತ್ತಾಯಿಸುತ್ತಿದ್ದಾರೆ.
ಇದನ್ನು ಅರಿತ ಶಾಸಕ ರಾಯರೆಡ್ಡಿ ಅವರು, ರೈತರ ಹಿತದೃಷ್ಟಿಯಿಂದ ಸರ್ಕಾರದಿಂದ ಘೋಷಣೆಯಾದ ಕನಿಷ್ಠ ಬೆಂಬಲ ಬೆಲೆ ದರದಲ್ಲಿ (ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ರೂಪಾಯಿ 2,400ದವರೆಗೆ) ಮೆಕ್ಕೆ ಜೋಳವನ್ನು ಈ ಕೂಡಲೇ ಖರೀದಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಪಶುಸಂಗೋಪನೆ ಮತ್ತು ರೇಷ್ಮೆ ಕೃಷಿ ಇಲಾಖೆಯ ಸಚಿವ ಕೆ. ವೆಂಕಟೇಶ್ ಅವರಿಗೆ ಪತ್ರಯೊಂದನ್ನು ಬರೆದಿದ್ದಾರೆ.
“ರೈತರ ಕಷ್ಟವನ್ನು ಅರಿತುಕೊಂಡು ಸರಕಾರ ಸಕಾಲಕ್ಕೆ ಬೆಂಬಲ ಬೆಲೆ ವದಗಿಸಿದರೆ ದೇಶದ ಬೆನ್ನೆಲುಬಾಗಿರುವ ರೈತನು ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾನೆ. ಸಚಿವರಿಗೆ ಸಾಕಾಲಕ್ಕೆ ಪತ್ರ ಬರೆದು ಮನವರಿಕೆ ಮಾಡಿದ ಶಾಸಕರಾದ ರಾಯರೆಡ್ಡಿ ಅವರಿಗೆ ಧನ್ಯವಾದಗಳು”