ಗದಗ ಜಿಲ್ಲೆ.ಲಕ್ಷ್ಮೇಶ್ವರ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಟ್ಟಣದ ಪುರಸಭೆ ಮುಖ್ಯ ಅಧಿಕಾರಿ ಮಹೇಶ್ ಹಡಪದ್ ನೇತೃತ್ವದಲ್ಲಿ ತಮಿಳುನಾಡಿನಿಂದ ಬಂದಿದ್ದ ರಾಜಕುಮಾರ ಹಾಗೂ ಅವರ ತಂಡ ಅಂದಾಜು ನೂರಕ್ಕೂ ಹೆಚ್ಚು ನಾಯಿ ಹಿಡಿಯಲು ಯಶಸ್ವಿಯಾದರು.
ಪಟ್ಟಣ ದಲ್ಲಿ ವಂದಿಲ್ಲ ಅಂದರೆ ಮತ್ತೊಂದು ಕಡೆ ಸಾರ್ವಜನಿಕರ ಮೇಲೆ ದಾಳಿ ಮಾಡಿ ಕಚ್ಚಿ ಗಾಯ ಮಾಡಿರುವುದು ಕಂಡು ಬಂದಿದ್ದು, ಹೆಚ್ಚಾಗಿರುವ ಬೀದಿ ನಾಯಿಗಳನ್ನು ಸೆರೆಹಿಡಿದು ಜನರನ್ನು ರಕ್ಷಣೆ ಮಾಡ ಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸಂಘಟನೆ ತಾಲೂಕ ಅಧ್ಯಕ್ಷ ಸೇರಿದಂತೆ ಅನೇಕ ಸಂಘಟನೆಗಳು ಮನವಿ ಸಲ್ಲಿಸಿದ್ದರು.
ಪಟ್ಟಣದ ಸೋಮೇಶ್ವರ ಮೌಸ ಮಾರುಕಟ್ಟೆ ಸುತ್ತಲು ನಾಯಿಗಳು ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು ಘಟನೆ ನಡೆಯುತ್ತಿದ್ದವು ಅಲ್ಲಿನ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕೆಂದು ಇಂದು ಜಿಲ್ಲೆಗೆ ಮಾದರಿಯಾಗುವಂತೆ ಪಟ್ಟಣದಲ್ಲಿ ತಮಿಳುನಾಡಿನ ರಾಜಕುಮಾರ್ ತಂಡವು ಕಷ್ಟಪಟ್ಟು ನಾಯಿ ಹಿಡಿದು ಬೇರೆ ಕಡೆ ವಾಹನದಲ್ಲಿ ಸ್ಥಳಾಂತರಿಸಿ ಸಾರ್ವಜನಿಕರ ನೆಮ್ಮದಿಗೆ ಪಾತ್ರರಾದರು.
ಈ ವೇಳೆ ಮಂಜುನಾಥ್ ಮುದಗಲ್, ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗೋಡೆ, ಬಸವರಾಜ್ ನಂದೆಣ್ಣವರ್, ನಾಗೇಶ್ ಅಮ್ರಾಪುರ್, ಸೇರಿದಂತೆ ಇನ್ನೂ ಅನೇಕರು ಭಾಗಿಯಾಗಿದ್ದರು.
ವರದಿ: ವೀರೇಶ್ ಗುಗ್ಗರಿ