LOCAL NEWS : ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ನಾಳೆ ಮತದಾನ..!!

You are currently viewing LOCAL NEWS : ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ನಾಳೆ ಮತದಾನ..!!

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ : ನಾಳೆ ಮತದಾನ..!!

ಕುಕನೂರು : ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ನಾಳೆ (ಡಿಸೆಂಬರ್ 29 ರಂದು) ಮತದಾನ ನಡೆಯಲಿದೆ.

ಕೃಷಿ ಪತ್ತಿನ ಸಹಕಾರಿ ಸಂಘದ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮದ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿದೆ. 12 ಸ್ಥಾನಗಳ ಪೈಕಿ ಬರೋಬ್ಬರಿ 24 ಮಂದಿ ಕಣದಲ್ಲಿದ್ದಾರೆ. 2,000 ಜನ ಶೇರುದಾರ ಸದಸ್ಯರಿದ್ದು, ಇದರಲ್ಲಿ 383 ಸಾಲಗಾರರು ಹಾಗೂ 79 ಸಾಲಗಾರಲ್ಲದ ಸದಸ್ಯರಿದ್ದಾರೆ. ಆದರೆ ಇನ್ನುಳಿದ ಸದಸ್ಯರನ್ನು ಏಕಾಏಕಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. 1,538 ಶೇರುದಾರ ಸದಸ್ಯರಿಗೆ ಮತ ನೀಡುವ ಅವಕಾಶವನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಕೇವಲ 398 ಸದಸ್ಯರಿಗೆ ಮತದಾನ ಮಾಡುವ ಅವಕಾಶವಿದೆ.

ಈ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ರಾಜಕೀಯ ಗೂಡಾಗಿದೆ. ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರನ್ನು ರಾಜಕೀಯವಾಗಿ ನೋಡಲಾಗುತ್ತಿದೆ ಎಂದು ಕೇಲವರ ಅಭಿಪ್ರಾಯವಾಗಿದೆ.

Leave a Reply

error: Content is protected !!