LOCAL NEWS : ವಿಕಲಚೇತನರು ಸಕಲಚೇತನರ ಕಡೆ ಸಾಗಲು ಜಾಗೃತಿ ಜಾಥಾ ಮಹತ್ವದ ಹೆಜ್ಜೆ: – ಜಿಲ್ಲಾಧಿಕಾರಿ ನಳಿನ್ ಅತುಲ್!

You are currently viewing LOCAL NEWS : ವಿಕಲಚೇತನರು ಸಕಲಚೇತನರ ಕಡೆ ಸಾಗಲು ಜಾಗೃತಿ ಜಾಥಾ ಮಹತ್ವದ ಹೆಜ್ಜೆ: – ಜಿಲ್ಲಾಧಿಕಾರಿ ನಳಿನ್ ಅತುಲ್!
xr:d:DAFtww-LQKk:3,j:741244302926934810,t:23090712

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ವಿಕಲಚೇತನರು ಸಕಲಚೇತನರ ಕಡೆ ಸಾಗಲು ಜಾಗೃತಿ ಜಾಥಾ ಮಹತ್ವದ ಹೆಜ್ಜೆ: – ಜಿಲ್ಲಾಧಿಕಾರಿ ನಳಿನ್ ಅತುಲ್!

ಕೊಪ್ಪಳ : ಸಂಸ್ಥಾನ ಗವಿಮಠ ಆಯೋಜಿಸಿರುವ ಸಕಲಚೇತನ ವಿಕಲಚೇತನರ ನಡೆ, ಸಕಲಚೇತನದ ಕಡೆ ಜಾಗೃತಿ ಅಭಿಯಾನ ಬಹಳ ಅಗತ್ಯ ಅನುಕೂಲವಾಗಿದೆ. ಇಲಾಖೆಯಿಂದ ವರ್ಷದಲ್ಲಿ ಎರಡು ಬಾರಿ ತಪಾಸಣೆಯನ್ನು ಮಾಡಲಾಗುತ್ತಿತ್ತು. ಪ್ರತಿ ಪ್ರತಿವರ್ಷದ ತಪಾಸಣೆಗೆ ವಿವಿಧ ಸಂಪನ್ಮೂಲದ ಕೊರತೆ ಆಗುತ್ತಿತ್ತು ಆದರೆ ಈ ವರ್ಷದಿಂದ ಈ ಕೊರತೆಯನ್ನು ಸಂಸ್ಥಾನ ಗವಿಮಠ ಹಾಗೂ ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್ ನೀಗಿಸಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಅಭಿಪ್ರಾಯ ಪಟ್ಟರು.

ಕೊಪ್ಪಳ ಗವಿಮಠ ಪ್ರತಿ ವರ್ಷ ಮಹಾ ಜಾತ್ರೋತ್ಸವದ ನಿಮಿತ್ಯ ಆಯೋಜಿಸುವ ಈ ವರ್ಷದ ಜಾಗೃತಿ ಜಾಥಾ ‘ವಿಕಲಚೇತನನ ನಡೆ ಸಕಲಚೇತನದ ಕಡೆ’ ಎಂಬ ಘೋಷವಾಕ್ಯದೊಂದಿಗೆ ಇಂದು (ದಿನಾಂಕ 11) ಬೆಳಗ್ಗೆ 8:00ಕ್ಕೆ ಆಯೋಜಿಸಿದ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದವರು. ಈ ಮಹತ್ವದ ಜಾಗೃತಿಯಿಂದ ವಿಕಲಚೇತನರು ಸಕಲಚೇತನರ ಕಡೆ ಸಾಗಲು ಮಹತ್ವದ ಹೆಜ್ಜೆಯಾಗಿದೆ. ಶ್ರೀಮಠವು ಇಂತಹ ವಿಶೇಷ ಸಾಮಾಜಿಕ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ನಂತರ ಕೊಪ್ಪಳ ತಾಲೂಕು ಶಾಸಕರಾದ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಈ ಈ ಜಾಗೃತಿ ಜಾಥಾ ಕಾರ್ಯಕ್ರಮ ಅಭಿಮಾನ ಪಡುವಂತಹದು ದೇವರು ಎಲ್ಲಿದ್ದಾನೆ ಎಂದರೆ ವಿಕಲಚೇತನರಿಗೆ ಚೇತನ ತುಂಬುವ ಕೆಲಸ ಮಾಡುತ್ತಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳಲ್ಲಿ ಇದ್ದಾನೆ. ತ್ರಿವಿಧ ದಾಸೋಹ ಜೊತೆಗೆ ಇಂತಹ ಮಹತ್ವದ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀಮಠದ ಜೊತೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.

ನಂತರ ಜಿಲ್ಲಾಧಿಕಾರಿಗಳು ಹಸಿರು ಬಾವುಟ ತೋರಿಸುವ ಮೂಲಕ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾರ್ವಜನಿಕ ಮೈದಾನದಿಂದ ಆರಂಭಗೊಂಡ ಈ ಜಾಗೃತಿ ಜಾಥಾವು ಅಶೋಕ ವೃತ್ತ ಗಡಿಯಾರ ಕಂಬದ ಮೂಲಕ ಶ್ರೀ
ಗವಿಮಠಕ್ಕೆ ತಲುಪಿತು.

ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಡಾ. ರಾಮ್.ಎಲ್.ಅರಸಿದ್ದಿ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗತ್ತಿ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪ ನಿರ್ದೇಶಕರಾದ ಜಗದೀಶ್ ಜಿ.ಹೆಚ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಉಪ ಪೊಲೀಸ್ ಪವರಿಷ್ಠಾಧಿಕಾರಿಗಳಾದ ಮುತ್ತಣ್ಣ. ಪಿ .ಸವರಗೋಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ವಿಜಯಕುಮಾರ ಪಾಟೀಲ, ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನ ಮಹೇಂದ್ರ ಸಿಂಘ್ವಿ, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶೀಕ್ಷಣಾಧಿಕಾರಿ ಶಂಕ್ರಯ್ಯ ಟಿ.ಎಸ್. ವಿವಿಧ ಇಲಾಖೆಗಳ, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ‘ಸಕಲಚೇತನ’ ‘ವಿಕಲಚೇತನರ ನಡೆ ಸಕಲಚೇತನರ ಕಡೆ’-ಜಾಗೃತಿ ಜಾಥಾ ಸಮಾರೋಪ ಸಮಾರಂಭ’ವ ನಂತರ 10:00 ಕ್ಕೆ ಶ್ರೀ ಗವಿಮಠದ ಮಹಾದಾಸೋಹದ ಆವರಣದಲ್ಲಿ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೆಶಕರಾದ ಎಂ.ಪುಷ್ಪಾವತಿ ಅವರು ಮಾತನಾಡಿ, ‘ಯಾರಿಗೆ ದೈಹಿಕವಾಗಿ ಸ್ವಲ್ಪ ತೊಂದರೆ ಇರುತ್ತೆ ಅವರನ್ನು ದಿವ್ಯಾಂಗರು ಎನ್ನುವರು. ಮಗು ಹುಟ್ಟಿದ ತಕ್ಷಣ ಭಾಷಿಕ ವಿಕಲಚೇತನವಾಗಿರುತ್ತೆ, ತದನಂತರ ಹಂತ ಹಂತವಾಗಿ ಮಾತನಾಡುವುದರ ಮೂಲಕ ಸಕಲಚೇನವಾಗುತ್ತದೆ. 21 ಪ್ರಕಾರದ ವಿಕಲಚೇತನರಿದ್ದಾರೆ. ಮಾತು ಮತ್ತು ಕಿವಿಗೆ ಸಂಬಂಧಿಸಿದವರು 13 ಪ್ರಕಾರ ಇದ್ದಾರೆ. ಕಿವಿಯಲ್ಲಿ ಕಿವು ಬರುವುದು. ಗುಂಯ್ಯ ಎಂದು ಶಬ್ದ ಬರುವದು ಕಿವಿಯ ವಿಕಲಚೇತನದ ಲಕ್ಷಣಗಳು ಇವರು ತಪಾಸಣೆಗೆ ಒಳಗಾಗಬೇಕು ಎಂದರು. ನಮ್ಮ ಸಂಸ್ಥೆಯ ಉದ್ಧೇಶ ವಿಕಲಚೇನರನ್ನು ಸಕಲಚೇತನರನ್ನಾಗಿ ಮಾಡುವದಾಗಿದೆ. ಪ್ರತಿ ವರ್ಷ ಜನಿಸುವ ಮಕ್ಕಳಲ್ಲಿ 75 ಸಾವಿರ ಜನಿಸುವ ಮಕ್ಕಳು ಮಾತಿನ ಸಮಸ್ಯೆಯಿಂದ ಬಳಲುತ್ತಾರೆ. ಇಂತಹ ಮಕ್ಕಳಿಗೆ ಚಿಕಿತ್ಸೆ ಅವರ ಸಮಸ್ಯೆ ಪರಿಹರಿಸಬಹುದಾಗಿದೆ ಎಂದರು.

ನಂತರ ಹುಬ್ಬಳ್ಳಿ ಲಿಂಬ್‌ಸೆAಟರ್‌ನ ಮಹೇಂದ್ರ ಸಿಂಘ್ವಿ ಮಾತನಾಡಿ, ‘ಶ್ರೀ ಗವಿಸಿದ್ಧೇಶ್ವರ ಜಾಥ್ರಾ ಅತ್ಯಂತ ಪ್ರಸಿದ್ಧವಾಗಿದೆ. ಈ ಮಹತ್ವದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅತ್ಯಂತ ಪ್ರೀತಿಯಿಂದ ಕೈಜೋಡಿಸಿದ್ದೆವೆ. ಪರಮ ಪೂಜ್ಯರು ಹೇಳುವಂತೆ ಹರ ಹರ ಮಹಾದೇವ ಎನ್ನುವ ಜಾತ್ರೆಯಾಗಿರದೆ ಜನರ ಸಮಸ್ಯೆಗಳಿಗೆ ಅನೂಕೂಲವಾಗುವ ಸ್ಪಂದಿಸುವ ಜಾತ್ರಾ ನಮ್ಮದಾಗಿದೆ ಎಂದು ಪೂಜ್ಯರ ನುಡಿಗಳನ್ನು ಸ್ಮರಿಸಿದರು. ಮೊದಲು ಕೃತಕ ಕೈಕಾಲುಗಳನ್ನು ಜೈಪುರದಿಂದ ತರುವದಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈಗ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ ಈ ಸಂಸ್ಥೆಯಿಂದ ಸಮಸ್ಯೆಗಳಿರುವ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಇದು ಒಂದು ಪರಮ ಪೂಜ್ಯರ ಮೌನ ಕ್ರಾಂತಿಯಾಗಿದೆ. ಈ ಸೇವೆಗೆ ನಮ್ಮ ಸಂಸ್ಥೆಯ ಸಹಕಾರ ಸದಾ ಇರುತ್ತದೆ ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ‘ಕಾಶ್ಮೀರ ಕಣಿವೆ ಒಂದು ಪುಟ್ಟ ಹಳ್ಳಿಯಲ್ಲಿ ಮಾನಸಿಂಗ್ ಮತ್ತು ಶಕ್ತಿ ದೇವತೆ ದಂಪತಿಗಳಿಗೆ ಒಂದು ಗಂಡು ಮಗು ಜನಿಸುತ್ತದೆ. ಎಲ್ಲರಿಗೂ ಮಗು ಜನಿಸಿದ ಸಂತಸವಾಗುತ್ತದೆ ಆದರೆ ಅವರಿಗೆ ಮಗು ಜನಿಸಿದಾಗ ದಂಪತಿಗಳಿಗೆ ಬಹಳ ದುಃಖವಾಗುತ್ತದೆ. ಕಾರಣ ಮಗುವಿಗೆ ಎರಡು ಕೈಗಳಿರುವುದಿಲ್ಲ, ಶಾಲೆ ಕಳಿಸುವುದಕ್ಕೆ ರಸ್ತೆಗಳಿಲ್ಲಿ ತಂದೆ ಬಹಳ ಬಡವ. ಇಂತಹ ಮಗುವಿಗೆ ಬಿಲ್ವಿದ್ಯೆ ಕಲಿಸುತ್ತಾರೆ ಮುಂದೆ ಆ ಮಗು ಪ್ಯಾರಾ ಒಲಂಪಿಕ್ ಗೇಮ್ಸ್ನಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕವನ್ನು ತಂದುಕೊಡುತ್ತಾಳೆ. ಅವಳೇ ಶೀತಲದೇವಿ, ಕಣ್ಣಿಲ್ಲದವರು ಭಿಕ್ಷಕರಾದವರಿದ್ದಾರೆ. ಆದರೆ ಕಣ್ಣಿಲ್ಲದಿದ್ದರೂ ಅಂತಹ ಸಾವಿರಾರು ಮಕ್ಕಳಿಗೆ ಕಣ್ಣಾದವರು ಪುಟ್ಟರಾಜ ಗವಾಯಿಗಳು. ಅಂತಹ ದಿವ್ಯಾಂಗರಿಗೆ ಆತ್ಮವಿಶ್ವಾಸ, ಪ್ರೀತಿ ತುಂಬವ ಅಗತ್ಯವಿದೆ ಎಂದು ಹೇಳಿದರು.

ಜಾಗೃತಿ ಜಾಥಾ ನಿಮಿತ್ತ ಹಮ್ಮಿಕೊಂಡ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್ ಜಿ.ಎಚ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಚೇರಮನ್ ವಿಜಯಕುಮಾರ ಪಾಟೀಲ, ಹುಬ್ಬಳ್ಳಿಯ ಮಹಾವೀರ ಲಿಂಬ್ ಸೆಂಟರ್‌ನ ಮಹೇಂದ್ರ ಸಿಂಘ್ವಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾಗಳಾದ ಶಂಕ್ರಯ್ಯ.ಟಿ.ಎಸ್. ಹಾಗೂ ವಿವಿಧ ಇಲಾಖೆ, ಮತ್ತು ಸಂಘ-ಸಂಸ್ಥೆಗಳ ಪದಾದಿಕಾರಿಗಳು, ಶಾಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು. ಶಕುಂತಲಾ ಬಿನ್ನಾಳ ಅವರು ಪ್ರಾರ್ಥಿಸಿದರು. ಶರಣಬಸಪ್ಪ ಬಿಳಿಯೆಲೆ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.

ವಿಶೇಷ ಸೂಚನೆ :-

ಮುಂದಿನ ವರ್ಷ ಜಾಗೃತಿ ಜಾಥಾ ನಡಿಗೆ ಕಾರ್ಯಕ್ರಮದ ವಿಷಯವನ್ನು ವಿದ್ಯಾರ್ಥಿಗಳು ಗುರುತಿಸಿ ಸೂಚಿಸಲು ತಿಳಿಸಲಾಗಿದೆ. ಸೂಕ್ತವಾದ ವಿಷಯ ಸೂಚಿಸಿದ ವಿದ್ಯಾರ್ಥಿಯಿಂದಲೇ 2026ರ ಜಾಗೃತಿ ಜಾಥಾ ಚಾಲನೆ ನೀಡುವ ಅವಕಾಶವನ್ನು ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಶ್ರಿ ಗವಿಮಠದ ಮೋಬೈಲ್ ವಾಟ್ಸಾಪ ಸಂಖ್ಯೆಗೆ 9980899219 ತಾವು ಮಾಹಿತಿಗಳನ್ನು ಕಳುಹಿಸಬಹುದಾಗಿದೆ ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

error: Content is protected !!