LOCAL NEWS : ಕೊಪ್ಪಳ ರೈಲ್ವೇ ಮೇಲ್ಸೇತುವೆ ನಿರ್ಮಾಣದಲ್ಲಿ ಸಂಗಣ್ಣ ಅವರ ಕೊಡುಗೆ ಅಪಾರ!: ಶಾಸಕ ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಕೊಪ್ಪಳ ರೈಲ್ವೇ ಮೇಲ್ಸೇತುವೆ ನಿರ್ಮಾಣದಲ್ಲಿ ಸಂಗಣ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಇಂದು ಕೇಂದ್ರ ರೈಲ್ವೆ ಇಲಾಖೆಯ ಆಶ್ರಯದಲ್ಲಿ ನಡೆದ ಕೊಪ್ಪಳ ಪಟ್ಟಣದ ಹೃದಯ ಭಾಗದಲ್ಲಿರುವ ಕುಷ್ಟಗಿ ರಸ್ತೆಯಲ್ಲಿನ ಎಲ್.ಸಿ. 66 ಗೇಟ್ ಗೆ ನಿರ್ಮಿಸಿರುವ ರೈಲ್ವೇ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಈ ರೈಲ್ವೇ ಮೇಲ್ಸೇತುವೆ ನಿರ್ಮಾಣದಲ್ಲಿ ಮಾಜಿ ಸಂಸದರರಾದ ಸಂಗಣ್ಣ ಕರಡಿ ಅವರ ಹೋರಾಟ ಹಾಗೂ ಅವರ ಕೊಡುಗೆ ಅಪಾರವಾಗಿದೆ’ ಎಂದು ಹೇಳಿದರು.
ಇದೇ ವೇಳೆಯಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿಯವರು ಗೈರಾಗಿದ್ದು, ಎದ್ದು ಕಾಣುತ್ತಿತ್ತು, ಇದನ್ನು ಗಮನದಲ್ಲಿ ಇಟ್ಟುಕೊಂಡು ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮುಂದುವರಿದು ಮಾತನಾಡಿದವರು, ‘ಸರ್ಕಾರದ ಪ್ರೋಟೋ ಕಾಲ್ ಪ್ರಕಾರ ರಾಜ್ಯದ ಕೆಲ ಮುಖಂಡರಿಗೆ ಆಹ್ವಾನ ನೀಡಬೇಕಿತ್ತು’ ಎಂದು ಒತ್ತಿ ಹೇಳಿದರು.