BIG BREAKING : ಇರಕಲಗಡ ಗ್ರಾಮದಲ್ಲಿ ಮಾದಕ ಗಾಂಜಾ ವಶ..! : ನಾಲ್ವರ ಬಂಧನ..!!

You are currently viewing BIG BREAKING : ಇರಕಲಗಡ ಗ್ರಾಮದಲ್ಲಿ ಮಾದಕ ಗಾಂಜಾ ವಶ..! : ನಾಲ್ವರ ಬಂಧನ..!!

ಪ್ರಜಾವೀಕ್ಷಣೆ ಸುದ್ದಿ :

BIG BREAKING : ಇರಕಲಗಡ ಗ್ರಾಮದಲ್ಲಿ  ಮಾದಕ ಗಾಂಜಾ ವಶ : ನಾಲ್ವರ ಬಂಧನ..!!


ಕೊಪ್ಪಳ : ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ತಂಡ ಖಚಿತ ಮಾಹಿತಿಯ ತಾಲೂಕಿನ ಇರಕಲಗಡ ಗ್ರಾಮದ ಮನೆಯೆಂದರೆ ಮೇಲೆ ದಾಳಿ ನಡೆಸಿದ್ದು ದಾಳಿಯ ವೇಳೆ ಗಾಂಜಾ ದೊರಕಿದ್ದು ವಶಪಡಿಸಿಕೊಂಡಿರುತ್ತಾರೆ

ಆರೋಪಿತರು ತಾಲೂಕಿನ ಇರಕಲಗಡ ಗ್ರಾಮದವರು ಎಂಬ ಮಾಹಿತಿ ದೊರೆತಿದ್ದು.ಗಾಂಜಾ ಮಾರಾಟಗಾರರ ಮೇಲೆ ದಾಳಿ ಮಾಡಿದ ಪೊಲೀಸರು ನಿಂಗಪ್ಪ ಗುರಿಕಾರ(50), ಮಾರುತಿ ಗುರಿಕಾರ (26), ರವಿ ಗುರಿಕಾರ (20), ನಾಗಪ್ಪ ಕುದುರಿಮೋತಿ (38 ) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ದಾಳಿ ಮಾಡಿದ ಸಂದರ್ಭದಲ್ಲಿ ಇವರ ಬಳಿ ಇದ್ದ ಸುಮಾರು 25,200 ರೂ. ಬೆಲೆ ಬಾಳುವ 630 ಗ್ರಾಂ ಗಾಂಜಾ ಮತ್ತು 15 ಗಂಜಾ ಗಿಡದ ಸಸಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕುರಿತು ಪೊಲೀಸರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಗುನ್ನೆ 149/2025 ಕಲಂ: 20 [b] [ii] [A], NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!