LOCAL BREAKING : ವಜ್ರಬಂಡಿಯಲ್ಲಿ ನೂತನ ಪಶು ಚಿಕಿತ್ಸಾಲಯಕ್ಕೆ ಚಾಲನೆ!!

You are currently viewing LOCAL BREAKING : ವಜ್ರಬಂಡಿಯಲ್ಲಿ ನೂತನ ಪಶು ಚಿಕಿತ್ಸಾಲಯಕ್ಕೆ ಚಾಲನೆ!!

ಪ್ರಜಾವೀಕ್ಷಣೆ ಸುದ್ದಿ : 

LOCAL BREAKING : ವಜ್ರಬಂಡಿಯಲ್ಲಿ ನೂತನ ಪಶು ಚಿಕಿತ್ಸಾಲಯಕ್ಕೆ ಚಾಲನೆ

ಯಲಬುರ್ಗಾ : ‘ಜಾನುವಾರುಗಳ ಹಿತದೃಷ್ಠಿಯಿಂದ ಎರಡು ವರ್ಷದಲ್ಲಿ ಕ್ಷೇತ್ರಕ್ಕೆ ಐದು ಪಶು ಆಸ್ಪತ್ರೆ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಇಂದು ತಾಲೂಕಿನ ವಜ್ರಬಂಡಿ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆಯನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕರಾದ ಶ್ರೀ ಬಸವರಾಜ ರಾಯರೆಡ್ಡಿ ಅವರು ನೇರವರಿಸಿದರು.

ಈ ವೇಳೆಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದ ಜಾನುವಾರು, ಕುರಿ, ಮೇಕೆಗಳ ಹಿತ ದೃಷ್ಟಿಯಿಂದ ನನ್ನ ಅವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ರೈತರು ಪ್ರಗತಿಗೆ ವಿಶೇಷ ಒತ್ತು ನೀಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರು ಸಹಕಾರ ಕೊಡಬೇಕು ಎಂದು ಹೇಳಿದರು.

ಈ ವೇಳೆಯಲ್ಲಿ ತಹಶೀಲ್ದಾರ್ ಬಸವರಾಜ್‌ ತೆನಳ್ಳಿ, ತಾಲೂಕ.ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್‌ ಬಿರಾದಾರ್, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಜರಿದ್ದರು.

Leave a Reply

error: Content is protected !!