BIG NEWS : ಗವಿಸಿದಪ್ಪ ನಾಯಕ ಹತ್ಯೆ, ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಲಿ : ಮಾಜಿ ಸಚಿವ ಶ್ರೀರಾಮುಲು
ಕೊಪ್ಪಳ : ಅಂತರ್ಜಾತಿ ಪ್ರೇಮದ ವಿಷಯವಾಗಿ ನಗರದ ಗವಿಸಿದ್ದಪ್ಪ ನಾಯಕ ಎಂಬ ಯುವಕನ ಹತ್ಯೆಯ ಹಿಂದೆ ಇರುವ ಕಾಣದ ಕೈಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೇಳಿದರು.
ನಗರದಲ್ಲಿರುವ ಮೃತ ಗವಿಸಿದ್ದಪ್ಪ ನಾಯಕ್ ಅವರ ಕುಟುಂಬವನ್ನು ಮಾಜಿ ಸಚಿವ ಬಿ ಶ್ರೀರಾಮುಲು ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಂಟೆಗೊಂದು ಮಾಹಿತಿ ನೀಡುತ್ತಿದ್ದಾರೆ . ರಾತ್ರೋ ರಾತ್ರಿ ಮರಣೋತ್ತರ ಪರೀಕ್ಷೆ ಮಾಡಿಸುತ್ತಾರೆ. ಮರುದಿನವೇ ಅಂತ್ಯ ಸಂಸ್ಕಾರ ಮಾಡಿಸುವ ಅವಸರ ಎಸ್ ಪಿ ಅವರಿಗೆ ಏನಿತ್ತು ? ಅಷ್ಟಕ್ಕೂ ಸಾದಿಕ್ ಎಂಬ ಯುವಕನಿಗೆ ಊರಿನ ಮಧ್ಯೆ ಕೊಲೆ ಮಾಡುವ ಧೈರ್ಯ ಎಲ್ಲಿಂದ ಬಂತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗವಿಸಿದ್ದಪ್ಪ ಅವರ ಆತ್ಮಶಾಂತಿಗೆ ಎಲ್ಲಾ ಧರ್ಮಿಯರು ನಿಂತು ಸಾದಿಕ್ ಮತ್ತು ಅವನಿಗೆ ಕೊಲೆ ಮಾಡಲು ಸಹಕರಿಸಿದವರಿಗೆ ಗಲ್ಲು ಶಿಕ್ಷೆ ಆಗುವವರೆಗೆ ಹೋರಾಡುತ್ತೇವೆ. ಈ ಹೋರಾಟ ಇಲ್ಲಿಗೆ ನಿಲ್ಲೊಲ್ಲ. ನಮ್ಮ ಸಮುದಾಯ ಒಂದು ನಿರ್ಣಯವನ್ನು ತೆಗೆದುಕೊಂಡಿದೆ. ಈ ಕುರಿತು ಶುಕ್ರವಾರ (ಆ.8)ರಂದು ಕೊಪ್ಪಳ ನಗರದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೆಸುಗೂರು, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಬಸವರಾಜ್ ಕ್ಯಾವಟರ್, ಮಲ್ಲಿಕಾರ್ಜುನ ಸ್ವಾಮಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್ ಪಾಟೀಲ್, ಶರಣು,ನಾಗರಾಜ್, ಗಿರಿಯಪ್ಪ ಬೂದುಗುಂಪ ಮತ್ತು ಸುರೇಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.