LOCAL NEWS : ಮಕ್ಕಳಿಗೆ ಶಿಕ್ಷಣದಲ್ಲಿ ಕಲಾತ್ಮಕ ಕಾರ್ಯಗಾರಗಳು ತುಂಬಾ ಮುಖ್ಯ : ನ್ಯಾ. ಮಹಾಂತೇಶ್ ದರಗದ

ಪ್ರಜಾ ವೀಕ್ಷಣೆ ಸುದ್ದಿ : 

LOCAL NEWS : ಮಕ್ಕಳಿಗೆ ಶಿಕ್ಷಣದಲ್ಲಿ ಕಲಾತ್ಮಕ ಕಾರ್ಯಗಾರಗಳು ತುಂಬಾ ಮುಖ್ಯ : ನ್ಯಾ. ಮಹಾಂತೇಶ್ ದರಗದ


ಕೊಪ್ಪಳ : ದೇಶದ ನಿರ್ಮಾತೃಗಳಾಗುವಂತಹ ಮಕ್ಕಳಿಗೆ ಶಿಕ್ಷಣದಲ್ಲಿ ಕಲಾತ್ಮಕ ಕಾರ್ಯಗಾರಗಳು ತುಂಬಾ ಮುಖ್ಯವಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ್ ಎಸ್. ದರಗದ ಹೇಳಿದರು.

ಅವರು ಶನಿವಾರ ಕೊಪ್ಪಳ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಕ್ಕಳ ಜಾಗೃತಿ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಸರಕಾರಿ ಮಕ್ಕಳ ಪಾಲನಾ ಸಂಸ್ಥೆ ಸರಕಾರಿ ಬಾಲಕರ ಮತ್ತು ಬಾಲಕಿಯರ ಬಾಲಮಂದಿರದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ “ಕಲಾತ್ಮಕ ರಚನೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ದೇಶದ ನಿರ್ಮಾತೃಗಳಾಗುವಂತಹ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲಾತ್ಮಕ ಕಾರ್ಯಕ್ರಮಗಳು ಮುಂದೆ ಅವರಿಗೆ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಸುಲಲಿತವಾಗಿ ಕಾರ್ಯನಿರ್ವಹಿಸಲು ಬಹು ಅನುಕೂಲವಾಗುತ್ತವೆ. ಮಕ್ಕಳು ಇಂತಹ ಕಲಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಮಕ್ಕಳಿಗೆ ಹಿತನುಡಿಗಳನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತ ಸ್ವಾಮಿ ಪೂಜಾರ ಅವರು ಮಾತನಾಡಿ, ಉತ್ತಮ ರೀತಿಯಲ್ಲಿ ರಾಷ್ಟ್ರ ನಿರ್ಮಾಣವಾಗಬೇಕಾದರೆ ಜ್ಞಾನ ಮತ್ತು ಅನುಭವ ಹೆಚ್ಚು ಸಹಕಾರಿಯಾಗಲಿದ್ದು, ಮಕ್ಕಳು ಪಾಠದೊಂದಿಗೆ ಹೆಚ್ಚು ಹೆಚ್ಚು ಕ್ರಿಯಾತ್ಮಕ, ಪ್ರಾಯೋಗಿಕ, ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಮತ್ತು ಪ್ರತಿದಿನ ಹೊಸದನ್ನು ಕಲಿಯುವ ಮತ್ತು ತಿಳಿದುಕೊಳ್ಳುವ ಹಂಬಲ ಬಳಸಿಕೊಳ್ಳಬೇಕು. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದರ ಬದಲಾಗಿ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳ ಜಾಗೃತಿಯ ಸಂಯೋಜಕ ಪ್ರಕಾಶ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಮಕೇಶವ ಅವರು ಕಾರ್ಯಕ್ರಮ ನಿರೂಪಿಸಿದರು. ಶರಣಮ್ಮ ಅವರು ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮೇಲ್ವಿಚಾರಕ ಮೈಲಾರಗೌಡರು, ಅಗಸ್ತ್ಯ ಪೌಂಡೇಶನ್‌ನ ಎಂ.ಮೈಲಾರಪ್ಪ ಸೇರಿದಂತೆ ಎರಡು ಸರ್ಕಾರಿ ಬಾಲ ಮಂದಿರಗಳ ಮತ್ತು ಮಕ್ಕಳ ಜಾಗೃತಿ ಸಿಬ್ಬಂದಿಗಳು ಹಾಗೂ ಬಾಲಮಂದಿರಗಳ ಮಕ್ಕಳು ಭಾಗವಹಿಸಿದ್ದರು

Leave a Reply

error: Content is protected !!