ಪ್ರಜಾ ವೀಕ್ಷಣೆ ಸುದ್ದಿ :
BIG NEWS : ದರ್ಶನ್ ಜೈಲು ಸೇರುವ ವಿಚಾರವಾಗಿ ನಟಿ ರಮ್ಯಾ ಮಾಧ್ಯಮಗಳಿಗೆ ಶಾಕಿಂಗ್ ಪ್ರತಿಕ್ರಿಯೆ..!!
ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ‘ದರ್ಶನ್ ಅವರು ತಮ್ಮ ಜೀವನ ತಾವೇ ಹಾಳು ಮಾಡಿಕೊಂಡರು. ಸಮಾಜದಲ್ಲಿ ಕಾನೂನು ಪ್ರಕಾರ ಎಲ್ಲಾ ನಡೆದುಕೊಳ್ಳಬೇಕು. ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು ಎಂದು ದರ್ಶನ್ ಜೈಲು ಸೇರುವ ವಿಚಾರವಾಗಿ ನಟಿ ರಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಈ ಕುರಿತು ಇಂದು ಬೆಂಗಳೂರಲ್ಲಿ ಮಾತನಾಡಿದ ರಮ್ಯಾ, ‘ತಮ್ಮ ಜೀವನ ತಾವೇ ಹಾಳು ಮಾಡಿಕೊಂಡರು. ಕಾನೂನು ಪ್ರಕಾರ ನಡೆದುಕೊಂಡರೆ ಸಮಾಜದಲ್ಲಿ ಒಳ್ಳೆಯ ದಾರಿಯಲ್ಲಿ ನಾವು ಹೋಗಬಹುದು ಹಾಗಾಗಿ ಕಾನೂನು ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು, ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ನನಗೆ ಸಹಜವಾಗಿ ಸಂತೋಷವಾಗಿದ್ದು, ಧನ್ಯವಾದಗಳು ಹೇಳುತ್ತೇನೆ ಎಂದರು.
‘ನಾನು ದರ್ಶನ್ ಕೆಲಸ ಮಾಡಿದ್ದೇನೆ ತುಂಬಾ ಚೆನ್ನಾಗಿ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಬೆಳೆದಿದ್ದಾರೆ. ಒಳ್ಳೆಯ ಹೆಸರು ಕೂಡ ಮಾಡಿದ್ದರು. ನನಗೆ ಅವರ ತುಂಬಾ ಹೆಮ್ಮೆ ಇದೆ. ಆದರೆ ಇವತ್ತು ಹೀಗೆ ಆಗದೆ ಹೋಗಿದ್ದರೆ ದರ್ಶನ್ ಇನ್ನೂ ಹೆಚ್ಚು ಬೆಳೆಯುತ್ತಿದ್ದರು. ಸಮಾಜದಲ್ಲಿ ಆದರ್ಶವಾಗಿ ಬದುಕುವುದು ಬಹಳ ಮುಖ್ಯ’ ಎಂದು ಹೇಳಿದರು.