ನೂತನವಾಗಿ ರಚನೆ ಮಾಡಲಾಗಿರುವ ಅಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ( ಎ ಐ ಸಿ ಸಿ ) ಸಮಿತಿಗೆ ಕರ್ನಾಟಕದಿಂದ ನಾಲ್ವರನ್ನು ನೇಮಕ ಮಾಡಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಎ ಐ ಸಿ ಸಿ ಸಮಿತಿಯಲ್ಲಿ ರಾಜ್ಯದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಬಿ ಕೆ ಹರಿ ಪ್ರಸಾದ್, ನಾಸಿರ್ ಹುಸೇನ್, ಬಿ ವಿ ಶ್ರೀನಿವಾಸ್ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಎ ಐ ಸಿ ಸಿ ಕಮಿಟಿ ಯಲ್ಲಿ ಸ್ಥಾನ ಪಡೆದ ನಾಲ್ವರಿಗೆ ಕೆ ಪಿ ಸಿ ಸಿ ಅಭಿನಂದನೆ ತಿಳಿಸಿದೆ.ಸಮಿತಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ಕಾಂಗ್ರೆಸ್ ನಾಯಕರು ಇದ್ದಾರೆ.