BREAKING : ಕುಕನೂರು | ಶಾರ್ಟ್ ಸರ್ಕ್ಯೂಟ್ ಆಗಿ ಡಿಪೋದಲ್ಲಿ ನಿಂತ್ತಿದ್ದ ಬಸ್ ಬಸ್ಮ..! : ಶೈಕ್ಷಣಿಕ ಪ್ರವಾಸಕ್ಕೆ ಇದೆ ಬಸ್ ಬಳಿಕೆ, ತಪ್ಪಿದ ದೊಡ್ಡ ಅನಾಹುತ..!!
ಪ್ರಜಾ ವೀಕ್ಷಣೆ ಸುದ್ದಿ :
ಕುಕನೂರು : ಪಟ್ಟಣದ ಕುಕನೂರು ಡಿಪೋದಲ್ಲಿ ನಿಂತಿದ್ದ ಬಸ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಭಸ್ಮವಾಗಿರುವುದು ನಿಜಕ್ಕೂ ದುರದೃಷ್ಟಕರ ಮತ್ತು ಆತಂಕಕಾರಿ ವಿಷಯವಾಗಿದೆ. ಈ ಘಟನೆಯೂ ತಡರಾತ್ರಿ 12ಗಂಟೆಗೆ ನಡೆದಿದೆ.
ನಿನ್ನೆ ತಡರಾತ್ರಿ 12 ಗಂಟೆಗೆ ಯಿಂದ 1 ಗಂಟೆ ವರೆಗಿನ ಸಮಯದೊಳಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತುತ್ತಿರುವ ವಿಡಿಯೋ ಸಿಸಿಟಿವಿ ಲಭ್ಯವಾಗಿದ್ದು, ಆಕಸ್ಮಿಕವಾಗಿ ಈ ಘಟನೆ ನಡೆದಿದೆ ಎಂದು ಡಿಪೋ ಮ್ಯಾನೇಜರ್ ಸಿ. ವೆಂಕಟಾಚಲಪತಿ ಹೇಳಿಕೆ ನೀಡಿದ್ದಾರೆ.
ಬಸ್ ಚಲಿಸುತ್ತಿರಲಿ ಅಥವಾ ಡಿಪೋದಲ್ಲಿ ನಿಂತಿರಲಿ, ವಿದ್ಯುತ್ ಸಂಪರ್ಕದಲ್ಲಿನ ಸಣ್ಣ ಲೋಪವೂ ಇಡೀ ವಾಹನವನ್ನು ಕ್ಷಣಾರ್ಧದಲ್ಲಿ ಬೂದಿ ಮಾಡಿದೆ. ಇದರಿಂದ ದೊಡ್ಡ ಅನಾಹುತ ಒಂದು ತಪ್ಪಿದೆ ಎಂದು ಹೇಳಬಹುದು.
ಇದೇ ಬಸ್ಅನ್ನು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಕಳಿಸಲಾಗಿತ್ತು. ನೆನ್ನೆ ಅಂದರೆ ಫೆಬ್ರವರಿ ಮೂರರಂದು ಬೆಳಗ್ಗೆಯಿಂದ ಸಂಜೆವರೆಗೆ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕಾಗಿ ಪಟ್ಟಣದ ಖಾಸಗಿ ಸಂಸ್ಥೆ ಎಸ್ಎಫ್ಎಸ್ ಸ್ಕೂಲ್ ನ 55 ಜನ ಮಕ್ಕಳನ್ನು ಈ ಬಸ್ ನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಅಂದೇ ರಾತ್ರಿ ಈ ಘಟನೆ ಸಂಭವಿಸಿದ್ದು, ಬಹಳ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ನಿನ್ನೆ ದಾರಿ ಮಧ್ಯದಲ್ಲೇ ಈ ರೀತಿಯಾಗಿದ್ದಾರೆ, ಬಹುದೊಡ್ಡ ಅನಾಹುತ ಒಂದು ನಡೆದಿರುತ್ತಿತ್ತು, ಅದೃಷ್ಟ ವಸಾಥ ಇಂತ ಯಾವುದೇ ಘಟನೆ ನಡೆದಿರುವುದೇ ಒಂದು ಚಮತ್ಕಾರವಾಗಿದೆ.
ಹಾನಿಗೊಳಗಾದ ಬಸ್ ನ ಸಂಕ್ಷಿಪ್ತ ವಿವರ : Enhance ಕಂಪನಿಯ 2017ರ ಮಾಡೆಲ್ ಬಸ್ ಇದಾಗಿದ್ದು, KA 37 F 0707, ಸರಿಸುಮಾರು ಎಂಟು ವರ್ಷಗಳ ಹಳೆಯ ಬಸ್ ಇದು,
“ರಾತ್ರಿ 8:30ಕ್ಕೆ ಈ ಬಸ್ ನಮ್ಮ ಡಿಪಿಗೆ ಇನ್ ಆಗಿದ್ದು, ಬಳಿಕ ಮೆಕಾನಿಕಲ್ ಎಕ್ಸ್ಪರ್ಟ್ ಗಳು ತಪಾಸಣೆ ಮಾಡಿ ಮುಗಿದ ನಂತರ, ಅದೇ ಸ್ಥಳದಲ್ಲಿ ಬಿಟ್ಟು ವಿಶ್ರಾಂತಿ ಮಾಡಿದ್ದಾರೆ ಬಳಿಕ ರಾತ್ರಿ ಅನ್ನ 12 ಗಂಟೆಗೆ ಸಣ್ಣಮಟ್ಟದ ಸ್ಪಾರ್ಕ್ ಒಂದು ಕಿಡಿಯಾಗಿ ಇಡೀ ಬಸ್ಸನ್ನೇ ಆವರಿಸಿ ಭಾಗಶ: ಬಸ್ ಸುಟ್ಟು ಕರಕಲಾಗಿದೆ. ಬಳಿಕ ಅಗ್ನಿಶಾಮಕಕ್ಕೆ ಫೋನ್ ಮಾಡಿ ಬೆಂಕಿಯ ಕೆನ್ನಾಲಿಗೆಯನ್ನು ಆರಿಸಿದ್ದಾರೆ. ಇದು ಸಿಬ್ಬಂದಿಗಳ ನಿರ್ಲಕ್ಷ ಎನ್ನುವುದಕ್ಕಿಂತ ಆಕಸ್ಮಿಕವಾಗಿ ಘಟನೆ ನಡೆದಿದೆ”
ಸಿ. ವೆಂಕಟಚಲಪತಿ ಡಿಪೋ ವ್ಯವಸ್ಥಾಪಕರು, ಬಸ್ ಡಿಪೋ ಕುಕನೂರು ಘಟಕ.
-: ಸಿಬ್ಬಂದಿಗಳ ನಿರ್ಲಕ್ಷವೇ ಕಾರಣ :-
ಬಸ್ ಡಿಪೋ ಗಳಲ್ಲಿ ಇಂತಹ ಘಟನೆ ತುಂಬಾ ವಿರಳ, ಬಸ್ನಲ್ಲಿ ಸ್ಯಾಟ ಸರ್ಕ್ಯೂಟ್ ಆಗುವುದು ಅಸಹಜ,
ವೈರಿಂಗ್ ದೋಷ : ಹಳೆಯ ಬಸ್‌ಗಳಲ್ಲಿ ವೈರಿಂಗ್ ಕಿತ್ತುಹೋಗಿರುವುದು ಅಥವಾ ಇಲಿಗಳು ವೈರ್ ಕಚ್ಚಿರುವುದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಬಹುದು.
ಎಂಜಿನ್ ಓವರ್ ಹೀಟಿಂಗ್: ದೀರ್ಘಕಾಲದ ಪ್ರಯಾಣದ ವೇಳೆ ಎಂಜಿನ್ ಅತಿಯಾಗಿ ಕಾಯುವುದು ಮತ್ತು ಕೂಲಿಂಗ್ ವ್ಯವಸ್ಥೆಯಲ್ಲಿನ ಲೋಪವಾಗಿದೆ.
ನಿರ್ವಹಣೆಯ ಕೊರತೆ: ಸರಿಯಾದ ಸಮಯಕ್ಕೆ ಎಲೆಕ್ಟ್ರಿಕಲ್ ಚೆಕ್-ಅಪ್ ಮಾಡಿಸದೇ ಇರುವುದು.
ಬ್ಯಾಟರಿ ಸಮಸ್ಯೆ: ಬ್ಯಾಟರಿ ಟರ್ಮಿನಲ್‌ಗಳಲ್ಲಿನ ಲೂಸ್ ಕನೆಕ್ಷನ್ ಕಿಡಿ ಉಂಟಾಗಲು ಕಾರಣವಾಗಬಹುದು.
-: ಬಸ್ ಡಿಪೋ ಆರ್ಥಿಕ ಭಾರಿ ನಷ್ಟ..!
ಆರ್ಥಿಕ ನಷ್ಟ: ಒಂದು ಕೆ.ಎಸ್.ಆರ್.ಟಿ.ಸಿ ಬಸ್‌ನ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿರುತ್ತದೆ, ಇದು ಸಂಸ್ಥೆಗೆ ದೊಡ್ಡ ಹೊಡೆತವಾಗಿದೆ.
ಸಾರ್ವಜನಿಕ ಸೇವೆಗೆ ಅಡ್ಡಿ: ಡಿಪೋದಲ್ಲಿ ಬಸ್ ಸಂಖ್ಯೆ ಕಡಿಮೆಯಾದಂತೆ ಆ ಮಾರ್ಗದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ.
ಇತರೆ ವಾಹನಗಳಿಗೆ ಅಪಾಯ: ಡಿಪೋದಲ್ಲಿ ಬಸ್‌ಗಳನ್ನು ಹತ್ತಿರ ಹತ್ತಿರ ನಿಲ್ಲಿಸಿರುವುದರಿಂದ, ಒಂದು ಬಸ್‌ನ ಬೆಂಕಿ ಪಕ್ಕದ ಬಸ್‌ಗಳಿಗೂ ಹರಡುವ ಸಾಧ್ಯತೆ ಇರುತ್ತದೆ. ಆದ್ರೆ ಇದಕ್ಕೆ ಆಸ್ಪದ ಕೊಡದ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಅಗ್ನಿಶಾಮಕ ವಾಹನ ಕರೆಯಲಾಗಿದ್ದು, ಬಹುದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ.