ಮುದಗಲ್ಲ ವರದಿ..
ಮುದಗಲ್ಲ :- ಹಡಪದ ಅಪ್ಪಣ್ಣ ಜಯಂತಿ ಆಚರಣೆ..
ಮುದಗಲ್ಲ :- ಪುರಸಭೆ ವತಿಯಿಂದ ಬುಧವಾರ
ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಮಾಡಿದರು ಹಡಪದ ಅಪ್ಪಣ್ಣನವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಹಡಪದ ಅಪ್ಪಣ್ಣನ ಸಮಾಜದ ಅಧ್ಯಕ್ಷರಾದ ಶಿವಣ್ಣ ಖೈರವಾಡಿಗಿ ಮಾತನಾಡಿ ,ಜಗಜ್ಯೋತಿ ಬಸವಣ್ಣನವರ ಸಮಕಾಲಿ ನವರಾದ ಶಿವಶರಣ ಹಡಪದ ಅಪ್ಪಣ್ಣನವರ ತತ್ವಾದರ್ಶ ಇಂದಿಗೂ ಅನನ್ಯವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಹಸನಾಗುತ್ತದೆ ಎಂದು ನಿಜಸುಖಿ ,ಶಿವಶರಣ, ವಚನಕಾರ ಶ್ರೀ ಹಡಪದ ಅಪ್ಪಣ್ಣನವರ ತತ್ವಾದರ್ಶಗಳು ಪ್ರಸ್ತುತ ಸಮಾಜಕ್ಕೆ ಪೂರಕವಾಗಿದ್ದು, ಸರ್ವರೂ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಯ ಕಂದಾಯ ವಿಭಾಗದ ಅಧಿಕಾರಿ ಅಂತೋಣಿ ರಾಜ್ ಮ್ಯಾನೇಜರ್ ಜಗದೀಶ್ ಗೌರವ ಅಧ್ಯಕ್ಷ ರಾದ ತಿಪ್ಪಣ್ಣ ಮೇಸ್ತಿಪೇಟೆ ,ಉಪಾಧ್ಯಕ್ಷರಾದ
ರಾಘವೇಂದ್ರ ಕಿಲ್ಲಾ, ಕಾರ್ಯಾಧ್ಯಕ್ಷ ರಾದ ಹನುಮಂತ ಎಂ. ಜೆರಮಡು ,ಪ್ರಧಾನ ಕಾರ್ಯದರ್ಶಿ ಯಾದ ಈಶಪ್ಪ ವ್ಯಾಕರನಾಳ ,ಕಾರ್ಯದರ್ಶಿ ಶರಣಪ್ಪ ತೊಂಡಿಹಾಳ , ಈಶಪ್ಪ , ಮಂಜುನಾಥ ಗಣೇಶ್ ಹಾಗೂ ಹನುಮಂತ ಹೂನೂರ ,ಬಸವರಾಜ ಆಮದಿಹಾಳ ಹಾಗೂ ಶರಣಪ್ಪನಾಗಲಾಪುರ , ವೀರೇಶ್ ಹಡಗಲಿ , ಸಂಗಪ್ಪ ಹಲಕಾವಟಗಿ , ತಿರುಪತಿ ಆಶಿಹಾಳ ಅವರನ್ನು ಸಂಘದ ಹಿರಿಯ ಮುಖಂಡರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದರು.
ವರದಿ:- ಮಂಜುನಾಥ ಕುಂಬಾರ