You are currently viewing PV NEWS : ಕುಕನೂರು | ಅಮೃತ್‌ 2.0 ಕಾಮಗಾರಿ ಎಫೆಕ್ಟ್!”: ಮಣ್ಣು ಕುಸಿದು ಸಿಲುಕಿದ ಬೃಹತ್ ಸಿಮೆಂಟ್ ಲಾರಿ!
1111.pdf - 2

PV NEWS : ಕುಕನೂರು | ಅಮೃತ್‌ 2.0 ಕಾಮಗಾರಿ ಎಫೆಕ್ಟ್!”: ಮಣ್ಣು ಕುಸಿದು ಸಿಲುಕಿದ ಬೃಹತ್ ಸಿಮೆಂಟ್ ಲಾರಿ!

PV NEWS : ಕುಕನೂರು | ಅಮೃತ್‌ 2.0 ಕಾಮಗಾರಿ ಎಫೆಕ್ಟ್!”: ಮಣ್ಣು ಕುಸಿದು ಸಿಲುಕಿದ ಬೃಹತ್ ಸಿಮೆಂಟ್ ಲಾರಿ!

1111.pdf – 2

 

ಪಟ್ಟಣದ ಮುಖ್ಯ ರಸ್ತೆಯಲ್ಲೇ ಅಪಾಯ! | ವಿಪರ್ಯಾಸ, ಕಾಮಗಾರಿಗೆ ಸಂಬಂಧಿಸಿದ ಲಾರಿಯೇ ಕಾಮಗಾರಿ ನಡೆದ ರಸ್ತೆ ಬದಿಯಲ್ಲಿ ಸಿಲುಕಿದ ಘಟನೆ; ಸ್ಥಳೀಯರ ಅಸಮಾಧಾನ!

PV NEWS ಕನ್ನಡ 24×7

ಕುಕನೂರು, ಸೆ. 24: ಪಟ್ಟಣದ ವೀರಭದ್ರಪ್ಪ ಸರ್ಕಲ್‌ ಹಾಗೂ ಎಸ್‌ಬಿಐ ಬ್ಯಾಂಕ್‌ ನಡುವಿನ ಮುಖ್ಯ ರಸ್ತೆಯಲ್ಲಿ ಸಿಮೆಂಟ್‌ ಸಾಗಿಸುತ್ತಿದ್ದ KA 22 AA 2041 ನೋಂದಣಿ ಸಂಖ್ಯೆಯ ಬೃಹತ್‌ ಲಾರಿಯೊಂದು ರಸ್ತೆ ಬದಿಯ ಮಣ್ಣು ಕುಸಿದು ಸಿಲುಕಿದ ಘಟನೆ ನಡೆದಿದೆ.

ಅಮೃತ್‌ 2.0 ಯೋಜನೆಯಡಿ ಕಾಮಗಾರಿ ನಡೆಸಿದ ಬಳಿಕ ರಸ್ತೆ ಬದಿಯ ಅಗೆದ ಸ್ಥಳವನ್ನು ಸಮರ್ಪಕವಾಗಿ ಭದ್ರಪಡಿಸದಿರುವುದೇ ಮಣ್ಣು ಕುಸಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಲಾರಿ ಸಿಲುಕಿದ ಪರಿಣಾಮ ಕೆಲಕಾಲ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ವಿಪರ್ಯಾಸವೆಂದರೆ, ರಸ್ತೆ ಬದಿಯ ಮಣ್ಣು ಕುಸಿದು ಸಿಲುಕಿದ ಈ ಬೃಹತ್‌ ಲಾರಿಯೂ ಅಮೃತ್‌ 2.0 ಯೋಜನೆಯ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳಲ್ಲಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಾಮಗಾರಿಗಾಗಿ ಸಾಮಗ್ರಿ ಸಾಗಿಸುತ್ತಿದ್ದ ಲಾರಿಯೇ ಕಾಮಗಾರಿ ನಡೆದ ಸ್ಥಳದಲ್ಲಿ ಸಿಲುಕಿರುವುದು ಸ್ಥಳೀಯರ ಗಮನ ಸೆಳೆದಿದೆ.

ಘಟನೆಯ ಬಳಿಕ ಸಿಲುಕಿದ್ದ ಲಾರಿಯನ್ನು ತೆರವುಗೊಳಿಸಲಾಗಿದ್ದು, ರಸ್ತೆ ಬದಿಯಲ್ಲಿ ಕುಸಿದಿದ್ದ ಜಾಗಕ್ಕೆ ಇದೀಗ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಸಂಚಾರಕ್ಕೆ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದೆ.

ಆದರೆ, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಬದಿಯನ್ನು ಸಮರ್ಪಕವಾಗಿ ಪುನರ್‌ಸ್ಥಾಪಿಸಿ ಭದ್ರಪಡಿಸಲಾಗಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾಮಗಾರಿ ಸ್ಥಳಗಳ ಗುಣಮಟ್ಟ ಹಾಗೂ ರಸ್ತೆ ಪುನರ್‌ಸ್ಥಾಪನೆ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Prajavikshane

Chandru R Bhanapaur

Leave a Reply

error: Content is protected !!