ಮುದಗಲ್ಲ :-ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಪಟಾಕಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸು ವಂತೆ ಮನವಿ.

ಮುದಗಲ್ಲ ವರದಿ..

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಪಟಾಕಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸು ವಂತೆ ಮನವಿ.

ಮುದಗಲ್ಲ:-  ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಸರ್ಕಾರವು ಜಾರಿಗೊಳಿಸಿರುವ ಪಟಾಕಿ ಮಾರ್ಗಸೂಚಿಗಳನ್ನು ಸ್ಥಳೀಯ ಪುರಸಭೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸ್ಥಳೀಯ ಪುರಸಭೆ ಗೆ ಮನವಿ ಪತ್ರ ಸಲ್ಲಿಸಲಾಯಿತು  ಮನವಿ ಪತ್ರವನ್ನು ಪುರಸಭೆ ಯ ಕಂದಾಯ ವಿಭಾಗದ ಯಲ್ಲಮ್ಮ ಅವರಿಗೆ ಮನವಿ ಸ್ವೀಕರಿಸಿದ್ದರು.
ಸರ್ಕಾರದ ಆದೇಶದಂತೆ ಅನುಮತಿಸಲಾದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಸರ್ಕಾರದ ಅನುಮತಿ ಇಲ್ಲದ ಹಾಗೂ ನಿಷೇಧಿತ ಪಟಾಕಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ, ತಕ್ಷಣವೇ ಅವುಗಳನ್ನು ವಶಪಡಿಸಿಕೊಂಡು ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು  ಹಾಗೂ ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ನಿಗಾವಹಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿದಲ್ಲಿ ಸಂಬಂಧಪಟ್ಟ ಆಡಳಿತಾ ಧಿಕಾರಿಗಳೇ ಹೊಣೆಗಾರರಾಗ ಬೇಕಾಗುತ್ತದೆ ಆದ್ದರಿಂದ ಸಾರ್ವಜನಿಕರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸರ್ಕಾರದ ನಿಯಮಗಳ ಪಾಲನೆಗಾಗಿ ಯಾವುದೇ ಕಾರಣಕ್ಕೂ ನಿಷೇಧಿತ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಎಂದು ಮಾನವ ಬಂಧುತ್ವ ವೇದಿಕೆ ಯ ಮುದಗಲ್ಲ ಘಟಕದ ಅಧ್ಯಕ್ಷರಾದ ಸಂಜುಕುಮಾರ್ ಚಲುವಾದಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಮೌನೇಶ್ ಶಿವನಗುತ್ತಿ,ಪಾಶ, ಮಹಮ್ಮದ್, ದೇವರಾಜ್ ಯಾದವ,ಸಂದೀಪ್ ಉಪಸ್ಥಿತರಿದ್ದರು
ವರದಿ :-ಮಂಜುನಾಥ ಕುಂಬಾರ 

Prajavikshane

Chandru R Bhanapaur

Leave a Reply

error: Content is protected !!