ಮುದಗಲ್ಲ ವರದಿ..
ಮುದಗಲ್ಲ ತಾಲೂಕು ಕನಸು ಭಗ್ನ..
ಮುದಗಲ್ಲ : ಜನಪ್ರತಿನಿಧಿಗಳು ನೀಡಿದ ಭರವಸೆಯನ್ನು ಅಧಿಕಾರಕ್ಕೆ ಬಂದ ನಂತರ ಮರೆಯುತ್ತಾರೆ ಎಂಬುದಕ್ಕೆ ಮುದಗಲ್ಲ ತಾಲೂಕು ಬೇಡಿಕೆ ಮತ್ತೆ ನನೆಗುದಿಗೆ ಬಿದ್ದಿರುವುದು ತಾಜಾ ನಿದರ್ಶನವಾಗಿದೆ.
ನೂತನ ತಾಲ್ಲೂಕು ಘೋಷಣೆಗೆ ಈ ಭಾಗದ ಜನ ನಾಲ್ಕು ದಶಕಗಳಿಂದ ಕಾಯುತ್ತಿದ್ದಾರೆ.ಮುದಗಲ್ ಹೋಬಳಿ 1952 ರಿಂದ 2008 ರವರೆಗೆ ಕುಷ್ಟಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿತ್ತು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ವೇಳೆ ಲಿಂಗಸುಗೂರು ಕ್ಷೇತ್ರಕ್ಕೆ ಸೇರಿಸಲಾಯಿತು.ಈ ಹೋಬಳಿ ಯವರು ವಿವಿಧ ಕೇತ್ರಗಳನ್ನು ಪ್ರತಿನಿಧಿಸಿ ಗೆದ್ದು ಶಾಸಕರು, ಸಚಿವರಾಗಿದ್ದಾರೆ. ಆದರೆ ಮುದಗಲ್ ತಾಲ್ಲೂಕು ಕೇಂದ್ರವನ್ನಾಗಿ ಮಾಡಿಸಲು ಯಾರೂ ಮನಸ್ಸು ಮಾಡಿಲ್ಲ ಎಂಬುದು ಜನರ ನೋವಿಗೆ ಕಾರಣ.ಮುದಗಲ್ ಪಟ್ಟಣಕ್ಕೆ ತಾಲ್ಲೂಕು ಘೋಷಣೆಗೆ ಇರಬೇಕಾದ ಎಲ್ಲ ಅರ್ಹತೆಗಳೂ ಇವೆ. ಭೌಗೋಳಿಕವಾಗಿ ದೊಡ್ಡದಾಗಿದೆ. ಈಗಾಗಲೇ ಇಲ್ಲಿ ಅನೇಕ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ .ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಎಪಿಎಂಸಿ,ಉಪ ತಹಶೀಲ್ದಾರ್, ರೈತ ಸಂಪರ್ಕ ಕೇಂದ್ರ ಹಾಗೂ ಖಜಾನೆ ಇಲಾಖೆ ಕಚೇರಿಗಳು ಇಲ್ಲಿವೆ.
ಕೃಷ್ಣಾನದಿ ಹತ್ತಿರದಲ್ಲಿದ್ದರೂ ಈ ಹೋಬಳಿ ನೀರಾವರಿಯಿಂದ ವಂಚಿತವಾಗಿದೆ. ಅಭಿವೃದ್ಧಿಯಾಗ ಬೇಕಾದರೆ ತಾಲ್ಲೂಕು ಘೋಷಣೆ ಮಾಡಬೇಕು ಎಂದು ಜನ ಒತ್ತಾಯಿಸುತ್ತಾರೆ
ಇಲ್ಲಿ ಅಂಥ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳಿಲ್ಲ. ಕಲ್ಲುಕ್ವಾರಿ ಬಿಟ್ಟರೆ ಜನತೆಗೆ ಕೆಲಸ ನೀಡುವ ಉದ್ಯಮಗಳಿಲ್ಲ. ರೈತರು ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದಾರೆ. ಆದ್ದರಿಂದ ಇದು ಹಿಂದುಳಿದ ಹೋಬಳಿಯಾಗಿಯೇ ಉಳಿದಿದೆ.ಮುದಗಲ್ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಕುಷ್ಟಗಿ ಕ್ಷೇತ್ರ ದಿಂದ ಶಾಸಕರಾಗಿದ್ದ ಮಾಜಿ ಶಾಸಕ ಎಂ.ಗಂಗಣ್ಣ ಅವರ ನೇತೃತ್ವದಲ್ಲಿ ಅನೇಕ ಹಿರಿಯರು ಹೋರಾಟ ಪ್ರಾರಂಭಿಸಿದ್ದರು. ಆದರೆ ಆಹೋರಾಟಕ್ಕೆ ಅಂಥ ಯಶಸ್ಸು ಸಿಗಲಿಲ್ಲ.
ದಶಕದ ಹಿಂದೆ ಹೊಸ ತಲೆಮಾರಿನ ಯುವಜನತೆ ಮತ್ತೆ ತಾಲ್ಲೂಕು ರಚನೆಗಾಗಿ ನೂತನ ತಾಲ್ಲೂಕು ರಚನಾ ಹೋರಾಟ ಸಮಿತಿ ರಚಿಸಿ ಹೋರಾಟ ಪ್ರಾರಂಭಿಸಿದೆ. ಇವರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಡಿ.ಎಸ್.ಎಸ್ ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಮುದಗಲ್ ಪಟ್ಟಣಕ್ಕೆ ತಾಲ್ಲೂಕು ಘೋಷಣೆಗೆ ಇರಬೇಕಾದ ಎಲ್ಲ ಅರ್ಹತೆಗಳೂ ಇವೆ. ಭೌಗೋಳಿಕವಾಗಿ ದೊಡ್ಡದಾಗಿದೆ. ಈಗಾಗಲೇ ಇಲ್ಲಿ ಅನೇಕ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಎಪಿಎಂಸಿ,ಉಪ ತಹಶೀಲ್ದಾರ್, ರೈತ ಸಂಪರ್ಕ ಕೇಂದ್ರ ಹಾಗೂ ಖಜಾನೆ ಇಲಾಖೆ ಕಚೇರಿಗಳು ಇಲ್ಲಿವೆ ಕೃಷ್ಣಾನದಿ ಹತ್ತಿರದಲ್ಲಿದ್ದರೂ ಈ ಹೋಬಳಿ ನೀರಾವರಿಯಿಂದ ವಂಚಿತವಾಗಿದೆ. ಅಭಿವೃದ್ಧಿಯಾ ಗಬೇಕಾದರೆ ತಾಲ್ಲೂಕು ಘೋಷಣೆ ಮಾಡಬೇಕು ಎಂದು ಜನ ಒತ್ತಾಯಿಸುತ್ತಾರೆ.
ವಿದಾನಸಭೆ ಚುನಾವಣೆ ವೇಳೆ ಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಸೂರು ತಾಲೂಕು ಕಾಂಗ್ರೆಸ್ ಪಕ್ಷದ ಕಾಯ೯ಕ್ರದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ತಾಲೂಕು ಮಾಡುತ್ತೇವೆ ಹಾಗೂ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಗಳ ಸಚಿವರಾದ ಹಾಗೂ ಮಾಜಿ ಮುಖ್ಯಮಂತ್ರಿ ಗಳಾದ ಎಚ್.ಡಿ.ಕುಮಾರಸ್ವಾಮಿ ಲಿಂಗಸೂರು ತಾಲೂಕಿನ ಮುದಗಲ್ಲ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮೊಟ್ಟ ಮೊದಲು ಐತಿಹಾಸಿಕ ಮುದಗಲ್ಲ ತಾಲೂಕು ಕೇಂದ್ರವನ್ನಾಗಿಸುವುದಾಗಿ ಭರವಸೆ ನೀಡಿದ್ದರು.ಅದರಂತೆ ಅದೇ ಸಂದರ್ಭದಲ್ಲಿ ಮುದಗಲ್ಲ ತಾಲೂಕು ಕೇಂದ್ರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರು ಭರವಸೆ ನೀಡಿದರು
ನಂತರ ಈ ಭಾರಿ ನಾನು ಗೆದ್ದರೆ ಮುದಗಲ್ಲ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಮಾಡುವೆ ತಾಲೂಕು ರಚನೆ ಮಾಡದಿದ್ದರೆ ನಿಮಗೆ ಮುಖ ತೋರಿಸುವುದ್ದಿಲ್ಲ ಎಂದು ಲಿಂಗಸೂರು ತಾಲೂಕಿನ ಶಾಸಕರಾದ ಮಾನಪ್ಪ ವಜ್ಜಲ್ ಅವರು ಬೂತ್ ಮಟ್ಟದ ವಿಜಯ ಅಭಿಯಾನ ದಲ್ಲಿ ಹೇಳಿದರು ಬಜೆಟ್ ಮಂಡನೆಯಲ್ಲಿ ತಾಲೂಕು ಘೋಷಣೆ ಆಗದಿರುವುದು ನೋಡಿದರೆ ಜನಪ್ರಿಯ ಶಾಸಕರಾದ ಮಾತು ಮರೆತರೆ ಎಂಬ ಸಂಶಯ ಮೂಡಿದೆ
ಹಿಂದೆ ತಾಲೂಕು ಹೋರಾಟ ಸಮಿತಿ ನಾನಾ ಪದಾಧಿಕಾರಿಗಳು ಹಾಗೂ ಗುರುಯರು ಬೆಂಗಳೂರು ಸಿ.ಎಂ ಅವರನ್ನು ಖುದ್ದಾಗಿ ಬೇಟಿ ಮಾಡಿದರು ತಾಲೂಕು ಘೋಷಣೆಗೆ ಒತ್ತಾಯಸಿದರೂ ಬೇಡಿಕೆಗೆ ಬೆಲೆ ಇಲ್ಲದಂತಾಗಿದೆ
ತಾಲೂಕು ಘೋಷಣೆ ಆಗಿದೆ ಇರುವುದು ತುಂಬಾ ನೋವು ತಂದಿದೆ ಮುದಗಲ್ಲ ಭಾಗದಲ್ಲಿ ಎರಡು ಬೇಡಿಕೆ ಒಂದು ಮುದಗಲ್ಲ ತಾಲೂಕು ಘೋಷಣೆ ಬೇಡಿಕೆಯೇ ಈಡೇರಿಲ್ಲ.
ವರದಿ:- ಮಂಜುನಾಥ ಕುಂಬಾರ