ಪತ್ರಕರ್ತ, ಸಂಜೆ ವಾಣಿ ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ…

ಮುದಗಲ್ಲ ವರದಿ..

ಪತ್ರಕರ್ತ, ವರದಿಗಾರ ಮಂಜುನಾಥ ಕುಂಬಾರ ಇವರಿಗೆ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ -2025” ಪ್ರಕಟ

ಐತಿಹಾಸಿಕ ಮುದಗಲ್ಲ ಪಟ್ಟಣದ ಪತ್ರಕರ್ತ, ಸಂಜೆ ವಾಣಿ ದಿನ ಪತ್ರಿಕೆ ವರದಿಗಾರರಾದ ಮಂಜುನಾಥ ಕುಂಬಾರ ಇವರಿಗೆ
ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹುಬ್ಬಳ್ಳಿ ಮತ್ತು ಪ್ರಜಾ ದರ್ಶನ ಕನ್ನಡ ಮಾಧ್ಯಮ ಸಂಸ್ಥೆಯ ಕೊಡ ಮಾಡುತ್ತಿರುವ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪತ್ರಕರ್ತರಿಗೆ ನೀಡುವ 2025 ಸಾಲಿನ “ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ 2025” ಘೋಷಣೆಯಾಗಿದೆ.

ವಿಶ್ವದರ್ಶನ ಮಾಧ್ಯಮ ಸಂಸ್ಥೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ವಿನೂತನ ಕಾರ್ಯಕ್ರಮವು ಇದಾಗಿದೆ.

ಹೀಗೆ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಕೊಡಮಾಡುವ ಪ್ರಶಸ್ತಿಗೆ ಲಿಂಗಸೂರ ತಾಲೂಕಿನ ಐತಿಹಾಸಿಕ ಮುದಗಲ್ಲ ಪಟ್ಟಣದ ಸಂಜೆ ವಾಣಿ ದಿನ ಪತ್ರಿಕೆ ಮುದಗಲ್ಲ ವರದಿಗಾರರಾದ ಮಂಜುನಾಥ ಕುಂಬಾರ ಈ ಬಾರಿ ಐತಿಹಾಸಿಕ ಅವರು ಆಯ್ಕೆಯಾಗಿರುವುದು ಸಂಸ್ಥೆ ಹೆಮ್ಮೆಯಿಂದ ದೃಢಪಡಿಸಿದೆ.

ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ದಿನಾಂಕ 10-08-2025 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಾರ್ಯಕ್ರಮ ಅನಾವರಣ ಗೊಳ್ಳಲಿದೆ. ವಿಶ್ವ ದರ್ಶನ 5 ನೇ ವಾಷಿ೯ಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ

ಸಂಪಾದಕರು :- ಚಂದ್ರು ಆರ್ ಭಾನಾಪೂರ್

 

Leave a Reply

error: Content is protected !!