LOCAL NEWS : ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ: ಹನುಮಂತಪ್ಪ ಬನ್ನಿಕೊಪ್ಪ
ಕುಕನೂರು : ‘ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆಯೂ ಆಗಿದೆ. ಶಿಕ್ಷಣವು ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಿದರೆ, ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ತಂಡದ ಮನೋಭಾವವನ್ನು ಬೆಳೆಸುತ್ತದೆ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಹೇಳಿದರು.
ಇಂದು ತಾಲೂಕಿನ ಮಸಬಹಂಚಿನಾಳ ಗ್ರಾಮದ ಗೌರಮ್ಮ ಬಸಪ್ಪ ಆಚಾರ್ ಸರ್ಕಾರಿ ಫ್ರೌಡ ಶಾಲೆಯಲ್ಲಿ 2025-26ನೇ ಸಾಲಿನ ಕುಕನೂರ ಪೂರ್ವ ವಲಯ ಮಟ್ಟದ ಫ್ರೌಡ ಶಾಲೆಗಳ ಕ್ರೀಡಾಕೂಟ ಸಮಾರಂಭ ನಡೆಯಿತು.
ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕ್ರೀಡೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಮಾನಸಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಂದೊಂದು ದಿನ ದೇಶದ ಸೈನಿಕರಾಗಿ ಹಾಗೂ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕ್ರೀಡೆ ಸಹಾಯಕವಾಗಲಿದೆ ಎಂದರು.
ದೈಹಿಕ ಶಿಕ್ಷಣಾಧಿಕಾರಿ ವೀರಭದ್ರಪ್ಪ ಅಂಗಡಿ, ಗ್ರಾಮದ ಹಿರಿಯ ಮುಖಂಡ ಪ್ರಭು ಆಚಾರ್, ವಿವಿಧ ಶಾಲೆಯ ದೈಹಿಕ ಶಿಕ್ಷಕರು, ಸಿಆರ್‌ಪಿ ಪೀರ್‌ಸಾಬ್ ದಫೇದಾರ್, ಯುವ ನಾಯಕ ಹಾಗೂ ಗ್ರಾ.ಸ ಮಹೇಶ್ ಗಾವರಾಳ್, ಅಂದಪ್ಪ ರಾಜೂರು, ರಾಘವೇಂದ್ರ ದೇಸಾಯಿ, ದೇವಪ್ಪ ದ್ಯಾಪುರ, ಪ್ರಭುಗೌಡ ಪಾಟೀಲ್, ಕಮಲಮ್ಮ… ಹಾ. ಉ. ಸಂಘದ ನಿರ್ದೇಶಕರು, ಶಿಕ್ಷಕ ವರ್ಗದವರು, ಊರಿನ ಗುರು ಹಿರಿಯರು, ಕ್ರೀಡಾ ಪ್ರೇಮಿಗಳು , ಕ್ರೀಡಾಪಟುಗಳಿದ್ದರು.