LOCAL NEWS : ಚನ್ನಪಟ್ಟಣ ಕಂದಾಯ ಗ್ರಾಮದ ಬೇಡಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಡಾ. ಚಂದ್ರು ಲಮಾಣಿ
ಶಿರಹಟ್ಟಿ : ತಾಲೂಕಿನ ಚನ್ನಪಟ್ಟಣ ಗ್ರಾಮಕ್ಕೆ ಶಾಸಕರಾದ ಡಾ.ಚಂದ್ರು ಲಮಾಣಿ ಯವರು ಭೇಟಿ ನೀಡಿ ಗ್ರಾಮದ ಅಭಿವೃದ್ಧಿ ವಿಷಯವಾಗಿ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು
ಬಹು ದಿನಗಳ ಕಂದಾಯ ಗ್ರಾಮದ ಬೇಡಿಕೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಈ ಬಗ್ಗೆ ಶೀಘ್ರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಗ್ರಾಮದ ಮನೆಗಳ ಹಕ್ಕು ಪತ್ರ ವಿತರಿಸುವ ಕುರಿತು ಕ್ರಮ ಕೈಗೊಳ್ಳಲು ನಿರ್ದೇಶನ ಸೂಚಿಸಿದರು.
ಗ್ರಾಮದ ಅಂಗನವಾಡಿ ಹಾಗೂ ವಿವಿಧ ಕುಂದುಕೊರತೆಗಳ ಕುರಿತು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಫಕ್ಕಿರೇಶ ರಟ್ಟಿಹಳ್ಳಿ, ಬಿ.ಡಿ.ಪಲ್ಲೇದ, ಹನುಮಂತ ಡೋಣಿ, ಹಾಲಪ್ಪ ದ್ಯಾಮಣ್ಣ ಸೊರಟೂರು, ಅರ್ಜುನ್ ಹಲ್ಯಾಳ, ಕೃಷ್ಣ ವಡ್ಡರ, ಚೆನ್ನಪ್ಪ ಬೆಂತುರ, ಶಂಕರ್ ಹಲ್ಯಾಳ, ಸುನಿಲ್ ರಾಟಿ, ಶಿವಾನಂದ್ ವಡ್ಡರ, ಮಂಜು ಶಿರಹಟ್ಟಿ, ಮುದುಕಪ್ಪ ವಡ್ಡರ, ಜಗದೀಶ್ ಭಜಂತ್ರಿ, ಈರಣ್ಣ ಕೆರೂರ, ಹಾಲಪ್ಪ ವಡ್ಡರ, ರಮೇಶ್ ಮೋಟೆಬೆನ್ನೂರು, ನಾಗರಾಜ ವಡ್ಡರ ವಲಯ ಅರಣ್ಯ ಅಧಿಕಾರಿಗಳಾದ ರಾಮಪ್ಪ ಪೂಜಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಯುವಕ ಮಿತ್ರರು ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ವೀರೇಶ್ ಗುಗ್ಗರಿ