BREAKING : ತಳಕಲ್‌ : 8 ವರ್ಷದ ಮಗು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ಹುಚ್ಚ ನಾಯಿ ದಾಳಿ! : ಸ್ಥಳೀಯ ಆಡಳಿತದ ಮೇಲೆ ಹೆಚ್ಚಿದ ಜನಾಕ್ರೋಶ..!!

You are currently viewing BREAKING : ತಳಕಲ್‌ : 8 ವರ್ಷದ ಮಗು ಸೇರಿ 10ಕ್ಕೂ ಹೆಚ್ಚು ಜನರ ಮೇಲೆ ಹುಚ್ಚ ನಾಯಿ ದಾಳಿ! : ಸ್ಥಳೀಯ ಆಡಳಿತದ ಮೇಲೆ ಹೆಚ್ಚಿದ ಜನಾಕ್ರೋಶ..!!

BREAKING : ತಳಕಲ್‌ : 8 ವರ್ಷದ ಮಗು ಸೇರಿ  10ಕ್ಕೂ ಹೆಚ್ಚು ಜನರ ಮೇಲೆ ಹುಚ್ಚ ನಾಯಿ ದಾಳಿ : ಸ್ಥಳೀಯ ಆಡಳಿತದ ಮೇಲೆ ಹೆಚ್ಚಿದ ಜನಾಕ್ರೋಶ..!!

 

ಪ್ರಜಾ ವೀಕ್ಷಣೆ ಡಿಜಿಟಲ್‌ ಡೆಸ್ಕ್‌ : ಕುಕನೂರು ತಾಲೂತಕಿನ ತಳಕಲ್‌ ಗ್ರಾಮದಲ್ಲಿ ಇಂದು ಬೆಳ್ಳಗ್ಗೆ 11 ಗಂಟೆ ಸುಮಾರಿಗೆ ಅಂದಾಜು 8 ವರ್ಷದ ಮಗು ಸೇರಿದಂತೆ ಸುಮಾರು 20 ಜನರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಈ ವೇಳೆಯಲ್ಲಿ ಯಮನೂರಸಾಬ್‌ ಮಾಬುಸಾಬ್‌ ನದಾಫ್‌ ಎಂಬ 8 ವರ್ಷದ ಮಗು ತಳಕಲ್‌ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಾಗ ಹುಚ್ಚ ನಾಯಿ ಮಾರಣಾಂತಿಕ ದಾಳಿ ಮಾಡಿದ್ದು, ಮಗುವಿನ ಮುಖಕ್ಕೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಪ್ರಕರಣದ ಬೆನ್ನಲ್ಲೇ ಹೆಚ್ಚಾದ ಸಾರ್ವಜನಿಕರ ಆಕ್ರೋಶ..!!

‘ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಅವುಗಳನ್ನು ನಿಯಂತ್ರಿಸುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ವಿಫಲವಾಗಿದೆ. ಅಧಿಕಾರಿಗಳು ಈ ಸೂಕ್ಷ್ಮ ಪರಿಸ್ಥತಿ ಅರಿತು ಸೂಕ್ತ ಪರಿಹಾರ ಹುಡುಕಬೆಕೇಂದು’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತುರ್ತು ಸಭೆ

ಬೀದಿ ನಾಯಿ ದಾಳಿಗೆ ಒಳಗಾದ ಬಾಲಕನ ಪೋಟೊ, ವಿಡಿಯೊ ಹಾಗೂ ಸುದ್ದಿ ವೈರಲ್‌ ವಾಗುತ್ತಿದ್ದಂತೆ, ಸಾರ್ವಜನಿಕರಿಂದ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಈ ಘಟನೆ ಬಳಿಕ ಸ್ಥಳೀಯ ಆಡಳಿತ ಮಂಡಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ತುರ್ತು ಸಭೆ ಕರೆಯಲಾಗಿತ್ತು. 

ಈ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ಪಶುಸಂಗೋಪನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಪಿಡಿಒ ವೀರನಗೌಡ ಅವರು ತುರ್ತು ಸಭೆ ಕರೆದು ಬೀದಿನಾಯಿಗಳನ್ನು ಹಿಡಿದು, ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ.

“ಈ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತತಕ್ಷಣವೇ ನಾವು ಕಾರ್ಯಪ್ರವೃತ್ತರಾಗಿದ್ದೇವೆ, ಕೇಲವು ದಿನಗಳಿಂದ ತಳಕಲ್ ಗ್ರಾಮಕ್ಕೆ ಮಧ್ಯ ರಾತ್ರಿ ಬೆರೆಕಡೆಯಿಂದ ಬಂದ ಕೇಲ ಜನ ಗಾಡಿಗಳಿಂದ ನಾಯಿಗಳನ್ನು ಬೀಟ್ಟುಹೋಗಿದ್ದಾರೆ ಎಂದು ಸ್ಥಳೀಯರೊಬ್ಬರು ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಈಗಾಗಲೇ ತನಿಖೆ ಮಾಡಿಸುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ತಗೆದುಕೊಳ್ಳಲಿದ್ದೇವೆ. ಜೊತೆಗೆ ಈಗ ಸದ್ಯಕ್ಕೆ ಬೀದಿನಾಯಿಗಳನ್ನು ಸರೆ ಹಿಡಿದು ಜನನಿಬಿಡ ಇಲ್ಲದ ಪ್ರದೇಶಕ್ಕೆ ಬೀದಿನಾಯಿಗಳನ್ನು ಬಿಡುವುದು ಕ್ರಮ ವಹಿಸಲಾಗುವುದು,  ಹುಚ್ಚ ನಾಯಿ ಯಿಂದ ದಾಳಿಗೆ ಒಳಗಾಗಿದ್ದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಮತೀಷ್ಟು ಚಿಕಿತ್ಸೆ ನಡೆಯಬೇಕಿದೆ, ಇಲ್ಲಿಯವರೆಗೆ ಈ ಹುಚ್ಚ ನಾಯಿ 10 ಜನರ ಮೇಲೆ ದಾಳಿ ನಡೆಸಿದೆ ಎಂದು ಅಧಿಕೃತ ಮಾಹಿತಿ ಇದೆ”

ವೀರನಗೌಡ,

ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಓ)

ಗ್ರಾಮ ಪಂಚಾಯತ್‌ ತಳಕಲ್.

 

Leave a Reply

error: Content is protected !!