ಮುದಗಲ್ಲ :-ರಾಯಚೂರು ಉತ್ಸವದ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ…

ಮುದಗಲ್ಲ :-ರಾಯಚೂರು ಉತ್ಸವದ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ…

ಮುದಗಲ್ :- ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ರೂಪಿಸಿರುವ ಜ್ಯೋತಿ ರಥಯಾತ್ರೆಗೆ ಮುದಗಲ್ಲ ಪುರಸಭೆ ಮುಂಭಾಗ ದಲ್ಲಿ ಆವರಣದಲ್ಲಿ ಪುರಸಭೆ ಯ ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ಬೋಗರ್ ಹಾಗೂ ನಾಡ ಕಛೇರಿಯ ಉಪ ತಹಶೀಲ್ದಾರ್ ತುಲಜಾ ರಾಮ್ ಸಿಂಗ್ ಅವರು ಸಿಬ್ಬಂದಿ ಚನ್ನಮ್ಮ ದಳವಾಯಿ ಹಿರೇಮಠ ಅವರು ಪೂಜೆ ಸಲ್ಲಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ರಥಯಾತ್ರೆಯನ್ನು ವಿವಿಧ ಶಾಲೆಯ ಮುದ್ದು ಮಕ್ಕಳು ಇಂದು ಸೋಮವಾರ ಸಾಯಂಕಾಲ ಅದ್ದೂರಿ ಯಾಗಿ ಸ್ವಾಗತಿಸಿದರು.

ಹೂವು, ತಳಿರು ತೋರಣಗಳಿಂದ ಶೃಂಗರಿಸಿದ್ದ ರಥವು ಗಮನ ಸೆಳೆಯಿತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಶಾಲೆಯ ಮುದ್ದು ವಿಧ್ಯಾರ್ಥಿ ಗಳು ಮೆರವಣಿಗೆ ಕಳೆ ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಯ ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪೋಲಿಸ್ ಠಾಣೆಯ ಸಿಬ್ಬಂದಿ ಗಳು ಮೆರವಣಿಗೆಯಲ್ಲಿಪಾಲ್ಗೊಂಡಿದ್ದರು.

 ಜ್ಯೋತಿ ಯಾತ್ರೆಯು ಪಟ್ಟಣದ ಪೋಲೀಸ್ ಠಾಣೆಯ ಮುಂಭಾಗ, ಬಂದಿತು. ನಂತರ ರಥ ಲಿಂಗಸೂರ ಪ್ರಯಾಣ ಬೆಳಿಸಿತು.ಸಿಂಧನೂರ, ಮಸ್ಕಿ, ಸೇರಿದಂತೆ ಫೆ.5ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ ತಿಳಿದು ಬಂದಿದೆ

 

ವರದಿ:- ಮಂಜುನಾಥ ಕುಂಬಾರ

Prajavikshane

Chandru R Bhanapaur

Leave a Reply

error: Content is protected !!