PV NEWS: ಕೊಪ್ಪಳ ಜಿಲ್ಲೆಯಲ್ಲಿ ವಸತಿ ಸಂಸ್ಥೆಗಳ ಕಡ್ಡಾಯ ನೋಂದಣಿಗೆ ಸೂಚನೆ!

PV NEWS ಕನ್ನಡ 24×7 :
ಕೊಪ್ಪಳ, ಆ. 13: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಸಹಿತ ಶಾಲೆ–ಕಾಲೇಜುಗಳು, ವಸತಿ ನಿಲಯಗಳು, ಕೋಚಿಂಗ್ ಸೆಂಟರ್‌ಗಳು ಹಾಗೂ ಧಾರ್ಮಿಕ ಶೈಕ್ಷಣಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.
6ರಿಂದ 18 ವರ್ಷದೊಳಗಿನ ಮಕ್ಕಳ ಸುರಕ್ಷತೆ, ಮೂಲಸೌಕರ್ಯ ಹಾಗೂ ಮಕ್ಕಳ ರಕ್ಷಣಾ ಕ್ರಮಗಳ ಮೇಲ್ವಿಚಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ‘Rules for Procedure for Regulating Stand-Alone Hostels for Children in Karnataka’ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ವಸತಿ ಸಂಸ್ಥೆಗಳು ಮಾರ್ಗಸೂಚಿಗಳು ಜಾರಿಯಾದ ದಿನಾಂಕದಿಂದ 6 ತಿಂಗಳೊಳಗಾಗಿ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಸರ್ಕಾರಿ ವಸತಿ ಸಂಸ್ಥೆಗಳು ಸಂಬಂಧಿಸಿದ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಅರ್ಜಿ ಸಲ್ಲಿಸಬೇಕು.
