You are currently viewing PV NEWS : ಬನ್ನಿಕೊಪ್ಪದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ: ಸ್ಮಾರಕ ಸ್ವಚ್ಛತೆ, ಮಾಜಿ ಯೋಧರಿಗೆ ಹಾಗೂ ಪೌರಕಾರ್ಮಿಕರಿಗೆ ಗೌರವ! 

PV NEWS : ಬನ್ನಿಕೊಪ್ಪದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ: ಸ್ಮಾರಕ ಸ್ವಚ್ಛತೆ, ಮಾಜಿ ಯೋಧರಿಗೆ ಹಾಗೂ ಪೌರಕಾರ್ಮಿಕರಿಗೆ ಗೌರವ! 

PV NEWS : ಬನ್ನಿಕೊಪ್ಪದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ: ಸ್ಮಾರಕ ಸ್ವಚ್ಛತೆ, ಮಾಜಿ ಯೋಧರಿಗೆ ಹಾಗೂ ಪೌರಕಾರ್ಮಿಕರಿಗೆ ಗೌರವ! 

PV NEWS ಕನ್ನಡ 24×7 | 

ಕುಕನೂರು, ಆ. 13 : ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರು ಹಾಗೂ ರೈತರ ಸ್ಮಾರಕದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಸ್ವಚ್ಛತಾ ಕಾರ್ಯದ ಬಳಿಕ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಕಾರ್ಯಕ್ರಮದ ಸವಿ ನೆನಪಿಗಾಗಿ ಸ್ಮಾರಕದ ಆವರಣದಲ್ಲಿ ಆಲದ ಮರವನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಬನ್ನಿಕೊಪ್ಪ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಗ್ರಾಮದ ಮಾಜಿ ಯೋಧರ ಮನೆಗಳಿಗೆ ಭೇಟಿ ನೀಡಿದ ಗಣ್ಯರು, ದೇಶ ಸೇವೆಯಲ್ಲಿ ಅವರು ಸಲ್ಲಿಸಿದ ಕೊಡುಗೆಯನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಗೌರಾ ಮಾತನಾಡಿ, “ಭಾರತಮಾತೆಯ ಸುಪುತ್ರರಾದ ನಾವು ದೇಶಭಕ್ತಿ ಮೆರೆಯಲು ನಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಬೇಕು. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರ ಸೇವೆಯನ್ನು ಸದಾ ಗೌರವಿಸಬೇಕು. ಊರನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು” ಎಂದು ಹೇಳಿದರು.

ಶಿವಕುಮಾರ ನಾಗಲಾಪುರಮಠ ಹಾಗೂ ಮಾರುತಿ ಗಾವರಾಳ ಮಾತನಾಡಿ, ಯುವಕರು ಮೂರು ದಿನಗಳ ಕಾಲ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಪ್ರಧಾನಮಂತ್ರಿಯವರ ಕರೆಯನ್ನು ಬೆಂಬಲಿಸಿ ದೇಶಭಕ್ತಿ ಮೆರೆಯಬೇಕು ಎಂದು ಮನವಿ ಮಾಡಿದರು.

‘ಹರ್ ಘರ್ ತಿರಂಗಾ’ ಯಲಬುರ್ಗಾ ಮಂಡಲ ಸಂಚಾಲಕ ನಾಗರಾಜ ವೆಂಕಟಾಪುರ ಮಾತನಾಡಿ, “ಸೈನಿಕನಾಗಿದ್ದಾಗ ದೇಶ ಸೇವೆ ಮಾಡುವ ಸೌಭಾಗ್ಯ ದೊರೆತಿತ್ತು. ಇದೀಗ ಹರ್ ಘರ್ ತಿರಂಗಾ ಯಾತ್ರೆಯ ಸಂಚಾಲಕನಾಗಿ ಮತ್ತೊಮ್ಮೆ ದೇಶ ಸೇವೆ ಮಾಡುವ ಅವಕಾಶ ದೊರೆತಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಸಿದ್ದಪ್ಪ ಮಾಳೆಕೊಪ್ಪ, ಹನುಮಂತಗೌಡ, ಈಶಪ್ಪ ಬ್ಯಾಳಿ, ಅಶೋಕ್ ಯಾರಾಶಿ, ವೀರಪ್ಪ ಗೊಂದಿ, ಮಂಜುನಾಥ ಬ್ಯಾಳಿ, ಭಾಸ್ಕರ್ ಬಾವಿಕಟ್ಟಿ, ಮಹಾಬಲೇಶ್ವರಪ್ಪ ಯಾರಾಶಿ, ಶರಣಪ್ಪ ಯಾರಾಶಿ, ವಿಜಯಕುಮಾರ ಎ.ವೈ., ಕಲ್ಲಪ್ಪ ಹಳ್ಳಿಕೇರಿ, ಶಿವಪ್ಪ ಚವಡಿ, ನಾಗರಾಜ ಹಳ್ಳಿಕೇರಿ, ಶರಣಪ್ಪ ಹೂಗಾರ್, ರಾಜು ರೇವಡಿಹಾಳ, ಸಿದ್ದು ಪ್ಯಾಟಿ, ಚನ್ನರಡ್ಡಿ ಯಾರಾಶಿ, ವಿರುಪನಗೌಡ ಎಸ್., ಸಿದ್ದಪ್ಪ ಜೀವಣ್ಣವರ, ರಮೇಶ್ ತಳವಾರ, ಗಿರೀಶ್ ಕಡೆಮನಿ, ಗೋಪಾಲ ಚಂಡಿ, ಸಲಬಪ್ಪ ಗೊಂದಿ, ಚನ್ನಪ್ಪ ಯಲಬುರ್ಗಿ ಹಾಗೂ ವೀರಣ್ಣ ಗೊಂದಿ ಸೇರಿದಂತೆ ಮಾಜಿ ಸೈನಿಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಯುವಕರು, ಗುರು–ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸ್ಮಾರಕದ ಸ್ವಚ್ಛತೆ, ಪೂಜೆ, ಸಸಿ ನೆಡುವಿಕೆ ಹಾಗೂ ಮಾಜಿ ಯೋಧರ ಗೌರವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.

PV NEWS ಕನ್ನಡ 24×7 | ಇದು ಪ್ರಜೆಗಳ ಪರ ಹದ್ದಿನ ಕಣ್ಣು

Prajavikshane

Chandru R Bhanapaur

Leave a Reply

error: Content is protected !!