ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ(ರಿ) ದೆಹಲಿ ಸಂಘಟನೆ ಪ್ರಾರಂಭ.
ಕುಕನೂರು : ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ(ರಿ) ದೆಹಲಿ ಸಂಘದ ಉದ್ಘಾಟನೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಮಹಾದೇವ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಪ್ರೋ ನಂಜುಂಡಸ್ವಾಮಿ ಅವರ ಮಗ ಪಜ್ಜೆ ನಂಜುಂಡ ಸ್ವಾಮಿ ಹಾಗೂ ಕುಷ್ಟಗಿ ರೈತ ಮುಖಂಡ ಸಿ.ಕೆ.ಪಾಟೀಲ ಹಾಗು ಕೃಷಿ ಇಲಾಖೆಯ ಅಧಿಕಾರಿಗಳ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಗು ವಿವಿಧ ಕಾಯಕಗಳನ್ನು ಮಾಡುತ್ತಿರುವ ಮಹನೀಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜಾನಪದ ಕಲಾವಿದ ಜೀವನ ಸಬಾ ಬಿನ್ನಾಳ ಅವರು ಜಾನಪದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗನ್ನು ತಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಹಾದೇವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸಂಘಟನೆಯ ರಾಷ್ಟೀಯ ಅಧ್ಯಕ್ಷ ಎಂ.ಎನ್. ಕುಕನೂರು, ಕಳಕಪ್ಪ ಕಂಬಳಿ, ಅಂದಪ್ಪ ಜವಳಿ, ಅರವಿಂದಗೌಡ ಪಾಟೀಲ, ಶರಣಪ್ಪ ದೊಡ್ಡಮನಿ, ಬಸಿರ ಅಹಮದ್ ಮುಲ್ಲಾ, ರಾಜು ಸಣ್ಣಕ್ಕಿ ಹಾಗೂ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ರೈತ ಮುಖಂಡರು ಹಾಗೂ ಇತರರಿದ್ದರು.