ಓಮನ್ ದೇಶದ ರಾಜಧಾನಿ ಮಸ್ಕತ್ ನಗರಕ್ಕೆ ವಿದೇಶಿ ಪ್ರಯಾಣ ಬೆಳೆಸಿದ ಜೀವನ ಸಾಬ
ಕುಕನೂರ : ತಾಲೂಕಿನ ಬಿನ್ನಾಳ ಗ್ರಾಮದ ಶಿಕ್ಷಕರು ಹಾಗೂ ಜಾನಪದ ಕಲಾವಿದರು ಆದ ಜೀವನ ಸಾಬ ಬಿನ್ನಾಳ ಇವರು ಓಮನ್ ದೇಶದ ರಾಜಧಾನಿ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಉತ್ತರ ಕರ್ನಾಟಕದ ಜನಪದ ಜಾತ್ರೆ ಎಂಬ ಕಾರ್ಯಕ್ರಮಕ್ಕೆ ವಿದೇಶಿ ಪ್ರಯಾಣ ಬೆಳೆಸಿದ್ದಾರೆ.
ದೂರದ ಓಮನ್ ದೇಶದಲ್ಲಿ ಭಾರತೀಯರೂ ಅದರಲ್ಲೂ ಉತ್ತರ ಕರ್ನಾಟಕ ಜನತೆ ಒಂದುಗೂಡಿ ಚಾಲುಕ್ಯ ಕೂಡ ಎಂಬ ಕನ್ನಡ ಸಂಘಟನೆಯನ್ನು ಕಟ್ಟಿಕೊಂಡು ಉತ್ತರ ಕರ್ನಾಟಕದ ಜನಪದ ಜಾತ್ರೆ ಎಂಬ ಕಾರ್ಯಕ್ರಮನ್ನು ಹಮ್ಮಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಬಿನ್ನಾಳ ಗ್ರಾಮದ ಜನಪದ ಕಲಾವಿದರಾದ ಜೀವನ ಸಾಬ ಬಿನ್ನಾಳ ಜಾನಪದ ಜ್ಞಾನಪದ ಎಂಬ ವಿಷದ ಕುರಿತು ಉಪನ್ಯಾಸ ನೀಡಲಿದ್ದಾರೆ
.