ಕುಕನೂರ : ಶಾಲೆ ರಜೆ ಎಂದು ಹೊಲದ ಕೆಲಸಕ್ಕೆ ಹೋಗಿದ್ದ ಬಾಲಕಿ ಮರಳಿ ಬಂದಿದ್ದು ಹೆಣವಾಗಿ,ವಿಧಿ ಆಟಕ್ಕೆ ಬದುಕಿ ಬಾಳ ಬೇಕಾದ ಬಾಲಕಿಯೊಬ್ಬಳು ಮೃತ ಪಟ್ಟಿದ್ದಾಳೆ.
ತಾಲೂಕಿನ ಬೆಣಕಲ್ ಗ್ರಾಮದಲ್ಲಿ 8ನೇ ತರಗತಿ ಓದುತ್ತಿದ್ದ ಗೀತಾ ತಂದೆ ಹನುಮಂತಪ್ಪ ತಳವಾರ್ (ಪೂಜಾ) ಎಂಬ ಬಾಲಕಿ ರವಿವಾರ ಶಾಲೆ ರಜೆ ಇದ್ದ ಕಾರಣಕ್ಕೆ ಬಡ ಕುಟುಂಬದ ನಿರ್ವಹಣೆ ನಿಗಿಸಲು ಊರ ಪಕ್ಕದ ಹೊಲಕ್ಕೆ ಗೊಬ್ಬರ ಹಾಕಿ ಟ್ಯಾಕ್ಟರ್ ಇಂದ ಬರುವಾಗ ಟ್ಯಾಕ್ಟರ್ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಬಂದಿದೆ.
ಮೃತ ಬಾಲಕಿ ತಂದೆ ಹನುಮಂತಪ್ಪ ತಳವಾರ್ ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳ, ಈ ಪೈಕಿ ಮೃತ ಗೀತಾ ಬೆಳಗ್ಗೆ 9:30ಕ್ಕೆ ಹೊಲಕ್ಕೆ ಹೋಗಿ ಬರುವಾಗ ಟ್ಯಾಕ್ಟರ್ ಡ್ರೈವರ್ ನ ಅಜಾರುಕತೆಯಿಂದ ಗೀತಾ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.