FLASH NEWS : ನೈತಿಕತೆ ಇದ್ದರೆ ತಂಗಡಗಿ ರಾಜೀನಾಮೆ ನೀಡಲಿ : ದೊಡ್ಡನಗೌಡ ಪಾಟೀಲ
ಕೊಪ್ಪಳ : ಶ್ರೀ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು 3.5 ಕೋಟಿ ಹಣ ಅನುದಾನ ನೀಡಲಾಗಿದ್ದು ಇದರಲ್ಲಿ ಈಗಾಗಲೇ ಮಠದ ಕಾಮಗಾರಿಗಳಿಗೆ 2.5 ಕೋಟಿ ವೆಚ್ಚವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು ಉಳಿದ 1.5 ಕೋಟಿ ಹಣ ಬಿಡುಗಡೆಗೆ ಶ್ರೀ ಕ್ಷೇತ್ರದ ಮಠದ ಸ್ವಾಮೀಜಿಗಳಿಂದ ಕಮಿಷನ್ ಕೇಳಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಎಂದು ವಿರೋಧ ಪಕ್ಷದ ಸಚೇತಕ ದೊಡ್ಡನಗೌಡ ಪಾಟೀಲ ಹೇಳಿದರು.
ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಪ್ರತೀಕಾಗೋಷ್ಠಿಯನ್ನು ಪೂಜಿಸಿ ದೊಡ್ಡನಗೌಡ ಪಾಟೀಲ ಮಾತನಾಡುತ್ತಾ ಇಷ್ಡುದಿನ ಗುತ್ತಿಗೆದಾರರು, ಅಧಿಕಾರಿಗಳಿಂದ ಕಲೆಕ್ಷನ್, ಕಮಿಷನ್ ಪಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟು ಸಿಕ್ಕಿಬಿದ್ದಿದೆ. ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಸಚಿವ ಶಿವರಾಜ್ ತಂಗಡಿಗೆ 25% ಕಮಿಷನ್ ಕೇಳಿದ್ದಾರೆಂದು ಶ್ರೀ ಮಠದ ಪೂರ್ಣಾನಂದಪೂರಿ ಸ್ವಾಮೀಜಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಇದು ಸಂಪೂರ್ಣ ಹಿಂದು ವಿರೋಧಿ ಸರ್ಕಾರ ಎಂದು ಸಾಬೀತಾಗಿದ್ದು.
ಮಠಗಳ ಬಳಿ ಕಮಿಷನ್ ಕೇಳುವ ನಿಮ್ಮ ಸರ್ಕಾರಕ್ಕೆ ಧೈರ್ಯ ಏನಾದರೂ ಇದ್ದರೆ ಮಸೀದಿಗಳಿಂದಲೂ ಕಮಿಷನ್ ಕೇಳುವ ತಾಕತ್ತು ತೋರಿಸಿ ನೋಡೋಣ ಎಂದು ಹೇಳಿದರು. ಸಚಿವ ಶಿವರಾಜ್ ತಂಗಡಿಗೆ ಸೇರಿದಂತೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಈ ಪತ್ರಿಕಾಗೋಷ್ಠಿ ಮೂಲಕ ಒತ್ತಾಯಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯ ಬಗ್ಗೆ 42% ಕಮಿಷನ್ ಆರೋಪದ ಸುಳ್ಳು ಹೇಳಿಕೆಯನ್ನು ನೀಡುತ್ತಿದ್ದ ಕಾಂಗ್ರೆಸ್ಸಿಗರು ಇದೀಗ ಪಟಾದೀಶರಿಂದ ನೇರ ಆರೋಪ ಹೊತ್ತಿದ್ದು ಮಠಮಾನ್ಯಗಳು ಸಮಾಜದ ಸೇವೆಗಳಲ್ಲಿ ತಮ್ಮದೇ ಪಾತ್ರವನ್ನು ವಹಿಸಿದ್ದು ಇಂತಹ ಮಠಮಾನ್ಯಗಳ ಅಭಿವೃದ್ಧಿಗಾಗಿ ಯಡಿಯೂರಪ್ಪನವರ ಆಡಳಿತದಲ್ಲಿ ಸಾಕಷ್ಟು ಸಹಾಯ ಹಸ್ತ ಚಾಚುವ ಕೆಲಸ ಮಾಡಿತ್ತು ಆದರೆ ಈ ಸರ್ಕಾರ ಮಠಮಾನ್ಯಗಳಿಂದಲೂ ಕಮಿಷನ್ ಕೇಳುತ್ತಾ ಇಡೀ ರಾಜ್ಯವೇ ತಲೆತಗ್ಗಿಸುವಂಥ ಕೆಲಸ ಮಾಡಿದೆ ಎಂದರು.
ಜಿಲ್ಲೆಯಲ್ಲಿ ಬಸವರಾಜ ರಾಯರೆಡ್ಡಿ ಪ್ರತಿನಿಧಿಸುವ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಶಾಲಾ-ಕಾಲೇಜುಗಳು ಆಗುವ ಸತಿ ಶಾಲೆಗಳು ಮಂಜೂರಾಗುತ್ತಿದ್ದು ಜಿಲ್ಲೆಯಲ್ಲಿ ತಾರತಮ್ಯ ಉಂಟಾಗುತ್ತಿದ್ದು ಎಲ್ಲಾ ಕ್ಷೇತ್ರಗಳನ್ನು ಮುಖ್ಯಮಂತ್ರಿಗಳು ಸಮಾನವಾಗಿ ಕಾಣಲಿ ಎಂದು ಹೇಳಿದರು.
ಈ ವೇಳೆಯಲ್ಲಿ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.