LOCAL NEWS : ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣವೂಹೊಸ ಮೈಲಿಗಲ್ಲು : ಸಂಗಮೇಶ್ ಗುತ್ತಿ
ಕುಕನೂರು : ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಜನಪ್ರಿಯ ಎನಿಸಿರುವ “ಶಕ್ತಿ ಯೋಜನೆ” ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣವೂಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ತಾಲೂಕ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಹೇಳಿದರು.
ಇಂದು ತಾಲೂಕ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಶಕ್ತಿ ಯೋಜನೆಯಡಿಬಸ್ ಪ್ರಯಾಣ 500 ಕೋಟಿ ದಾಟಿದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಕುಕನೂರು ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇವಲ ಎರಡು ವರ್ಷದ ಅವಧಿಯಲ್ಲಿ ಕುಕನೂರು ತಾಲೂಕಿನಲ್ಲೆ ಕುಕನೂರು ಘಟಕದಿಂದ ಮಹಿಳೆಯರು ಬಸ್ ಪ್ರಮಾಣ ಮಾಡದ ಒಟ್ಟು ಸಂಖ್ಯೆ 91,22,271 ಪ್ರಯಾಣ ಮಾಡಿದ್ದಾರೆ. ಇದಕ್ಕೆ ವೆಚ್ಚ ಒಟ್ಟು ಮೊತ್ತ 33,96,48,776 ರೂಪಾಯಿಗಳು ಸರ್ಕಾರವು ಟಿಕೇಟ್ ದರವನ್ನು ಭರಿಸಿದೆ’ ಎಂದು ಸಂಗಮೇಶ್ ಗುತ್ತಿ ಮಾಹಿತಿ ನೀಡಿದ್ದಾರೆ.
ಈ ವೇಳೇಯಲ್ಲಿ ಮಹಿಳಾ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಖಾಸಿಂ ಸಾಬ್ ತಳಕಲ್, ಕುಕನೂರು ಗ್ರೇಡ್-2 ತಹಶೀಲ್ದಾರ್ ಮುರಳಿಧರ್ ರಾವ್ ಕುಲ್‌ಕರ್ಣಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ್, ಪ.ಪಂ. ಉಪಾಧ್ಯಕ್ಷ ಪ್ರಶಾಂತ್ ಆರ್‌ಬೇಳ್ಳಿನ್ ಹಾಗೂ ಕುಕನೂರು ಬಸ್ ಡಿಪೋ ಮ್ಯಾನೇಜರ್ ಸೇರಿ ಬಸ್ ನಿರ್ವಾಹಕರು, ಮಹಿಳೆಯರು ಕಾಂಗ್ರೆಸ್ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.