ರೈತರ ನೋವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಲಿ.
ಯಲಬುರ್ಗಾ: ಹಗಲು ರಾತ್ರಿ ಭೂಮಿ ಜೊತೆ ಶ್ರಮಿಸುತ್ತಿರುವ ರೈತರ ನೋವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಸಹರಾ ಸಂಸ್ಥೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎನ್.ಎಸ್. ತಾವರಗೇರಾ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದರು.
ಅವರು ಇಂದು ಯಲಬುರ್ಗಾ ತಾಲೂಕಿನ ಬೇವೂರು ಹೋಬಳಿಯ ಶ್ರೀ ಸಂಗನಬಸವ ರೈತ ಉತ್ಪಾದಕರ ಕಂಪನಿಯ ಷೇರುದಾರರ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ಇಂದು ಕೃಷಿ ಭೂಮಿ ಬಂಡವಾಳಶಾಹಿ ವ್ಯವಸ್ಥೆಯ ನಡುವೆ ಸಿಲುಕಿ ರೈತರ ಸಮಸ್ಯೆಗಳು ತೀವ್ರ ಸ್ವರೂಪ ಪಡೆಯುತ್ತಿದ್ದು ಕೂಡಲೇ ಸರ್ಕಾರ ರೈತರ ಪರವಾಗಿ ಮತ್ತು ಕೃಷಿ ಭೂಮಿ ಕೃಷಿ ಬೆಳೆಗಾಗಿ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಅಲ್ಲಾಗಿರಿರಾಜ್ ಕನಕಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕೃಷಿ ಭೂಮಿ, ಜಲ ಸಂಪತ್ತು ಉಳಿದರೆ ಅನ್ನ ನೀರು. ಇಲ್ಲವೆಂದರೆ ಮುಂದೊಂದು ದಿನ ಜಗತ್ತಿನಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Protest : ಹೊಸ ಮದ್ಯದ ಅಂಗಡಿ ತೆರಯುವುದಕ್ಕೆ ಲೈಸೆನ್ಸ್ ನೀಡಿದ ಸರ್ಕಾರ ವಿರುದ್ಧ ಬೃಹತ್ ಪ್ರತಿಭಟನೆ!!
ಸಂಗನಬಸವ ರೈತ ಉತ್ಪಾದಕರ ಕಂಪನಿಯ ಸಿಇಒ ಡಿ.ಕೆ.ಗೊಂದಿ ಷೇರುದಾರರ ಮಹಾ ಸಭೆಯನ್ನು ಉದ್ದೇಶಿಸಿ ಕಂಪನಿ ನಡೆದು ಬಂದ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಕಂಪನಿಯ ಅಧ್ಯಕ್ಷರಾದ ಹನುಮಂತಪ್ಪ ಮೇಟಿ ವಹಿಸಿದ್ದರು.
ಷೇರುದಾರರ ಮಹಾ ಸಭೆಯಲ್ಲಿ ಕಳಕಪ್ಪ ಬೇವೂರು ಅವರು ರೈತರಿಗೆ ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಹೇಗೆ ಮಾಡಬೇಕು ಎಂದು ವಿಶೇಷ ಉಪನ್ಯಾಸ ನೀಡಿದರು.
ನಂತರ ರೈತ ಉತ್ಪಾದಕರ ಕಂಪನಿ ಷೇರುದಾರರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆ ಮೇಲೆ ಸಂಸ್ಥೆಯ ಗೌರವಾಧ್ಯಕ್ಷರಾದ ಕೂಡ್ಲೆಪ್ಪ ಗೊಂದಿ ನಿರ್ದೇಶಕರಾದ ಮಲ್ಲಪ್ಪ ಕರಡಿ,ಹೇಮಣ್ಣ ಲಂಬಾಣಿ, ಶರಣಪ್ಪ ಮೂಗ್ತಿ, ಸಂಗಮ್ಮ ಮದ್ಲೂರು, ಯಮನಪ್ಪ ಗಡ್ಡದ, ಮಲ್ಲಪ್ಪ ಭಾವಿಕಟ್ಟಿ, ಹನುಮಂತಪ್ಪ ಮುತ್ತಾಳ ಉಪಸ್ಥಿತರಿದ್ದರು.
.