LOCAL NEWS : ಸ್ವಚ್ಛತೆ ಇದಲ್ಲಿ ದೇವರು ನೆಲೆಸಿರುತ್ತಾನೆ : ಸಿ.ಇ.ಓ ರಾಹುಲ್ ರತ್ನಮ್ ಪಾಂಡೆ

You are currently viewing LOCAL NEWS : ಸ್ವಚ್ಛತೆ ಇದಲ್ಲಿ ದೇವರು ನೆಲೆಸಿರುತ್ತಾನೆ : ಸಿ.ಇ.ಓ ರಾಹುಲ್ ರತ್ನಮ್ ಪಾಂಡೆ

ಕುಕನೂರು : “ಸ್ವಚ್ಛತೆ ಇದಲ್ಲಿ ದೇವರು ನೆಲೆಸಿರುತ್ತಾನೆ. ಹಾಗಾಗಿ ನಿಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಶ್ರಮದಾನದ ಮೂಲಕ ಸ್ವಚ್ಚತೆಯ ಜಾಗೃತಿ ಮೂಡಿಸಿ” ಎಂದು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಮ್ ಪಾಂಡೆ ಹೇಳಿದರು.

ರೈತರ ನೋವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸಲಿ : ಎನ್.ಎನ್. ತಾವರಗೇರಾ

ನಿಧಾನ ವಾರ್ತೆ : ಈ ಭಾಗದ ಖ್ಯಾತ ಕಲಾವಿದ ಬೀಮಪ್ಪ ವಿರುಪಾಕ್ಷಪ್ಪ ಹನಸಿ ನಿಧನ!!

ಇಂದು ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಅತೀ ಪುರಾತನ ದೇವಾಲಯವಾದ ಶ್ರೀ ಮಹೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಚ್ಚ ಹೀ ಸೇವಾ ಕಾರ್ಯಕ್ರಮಕ್ಕೆ ಜಿ.ಪಂ.ಕೊಪ್ಪಳ ಸಿ.ಇ.ಓ ರಾಹುಲ್ ರತ್ನಂ ಪಾಂಡೇಯ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಆರೋಗ್ಯವಂತ ಜೀವನ & ಉತ್ತಮ ಪರಿಸರ ನಿರ್ಮಾಣಕ್ಕಾಗಿ ಶ್ರಮದಾನ ಒಂದು ಸಂಜೀವಿನಿ. ಜಿಲ್ಲೆಗೆ 50 ಸಮುದಾಯ ಶೌಚಾಲಯ ಬಂದಿದೆ. ವೈಯಕ್ತಿಕ ಶೌಚಾಲಯ ಕಟ್ಟಲು ಸ್ಥಳಾವಕಾಶ ಇಲ್ಲದಿರುವ ಕುಟುಂಬಗಳಿಗೆ ಜಿಲ್ಲೆಯಾಧ್ಯಂತ 50 ಸಮುದಾಯ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು ಇವುಗಳನ್ನು ತಮ್ಮ ಶೌಚಾಲಯದಂತೆಯೇ ಬಳಸಬೇಕು. ಬಯಲು ಶೌಚಾಲಯ ತಡೆಯಲು ಈ ಯೋಜನೆ ತರಲಾಗಿದೆ. ಈ ಸ್ವಚ್ಚತಾ ಹೀ ಅಭಿಯಾನ ಕೇವಲ 17 ದಿನಗಳು ಉಳಿಯದೇ ಅದು ನಿರಂತರವಾಗಬೇಕು ಎಂದು ಹೇಳಿದರು.

Protest : ಹೊಸ ಮದ್ಯದ ಅಂಗಡಿ ತೆರಯುವುದಕ್ಕೆ ಲೈಸೆನ್ಸ್ ನೀಡಿದ ಸರ್ಕಾರ ವಿರುದ್ಧ ಬೃಹತ್‌ ಪ್ರತಿಭಟನೆ!!

ಸ್ವಚ್ಚ ಹೀ ಸೇವಾ ಕಾರ್ಯಕ್ರಮವು ಮಹಾತ್ಮಾ ಗಾಂಧಿಯವರ ಸ್ವಚ್ಛ ಭಾರತದ ಕನಸಿಗೆ ಕೊಡುಗೆ ನೀಡಲು ಜನರನ್ನು ಸಜ್ಜುಗೊಳಿಸುವುದು ಮತ್ತು ನೈರ್ಮಲ್ಯಕ್ಕಾಗಿ ಜನಾಂದೋಲನವನ್ನು (ಸಾಮೂಹಿಕ ಚಳುವಳಿ) ಬಲಪಡಿಸುವುದು ಇದರ ಉದ್ದೇಶವಾಗಿದೆ. ಈ ಅಭಿಯಾನವು ಸ್ವಚ್ಛತೆ ಮತ್ತು ಶೌಚಾಲಯಗಳ ನಿರ್ಮಾಣಕ್ಕಾಗಿ ಸ್ವಯಂಸೇವಕರಾಗಿ ಸಮಾಜದ ಎಲ್ಲಾ ವರ್ಗಗಳ ಜನರನ್ನು ದೊಡ್ಡ ಪ್ರಮಾಣದಲ್ಲಿ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಅವರು ಸಾರ್ವಜನಿಕ ಮತ್ತು ಪ್ರವಾಸಿ ಸ್ಥಳಗಳ ಸ್ವಚ್ಛತೆ ಮತ್ತು ಪರಿಸರವನ್ನು ಬಯಲು ಶೌಚ ಮುಕ್ತಗೊಳಿಸಲು ಗುರಿಪಡಿಸುತ್ತಾರೆ.

BREAKING : ಕಾವೇರಿ ನೀರಿಗಾಗಿ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್!!

ಅಭಿಯಾನದ ಪ್ರಮುಖ ಭಾಗವೆಂದರೆ ಬಡವರು ಮತ್ತು ಅಂಚಿನಲ್ಲಿರುವವರನ್ನು ತಲುಪುವುದು ಮತ್ತು ಅವರಿಗೆ ಸುಸ್ಥಿರ ನೈರ್ಮಲ್ಯ ಸೇವೆಗಳನ್ನು ಒದಗಿಸುವುದು ಆಗಿದೆ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಗಳನ್ನು ಬಳಸಬೇಕು,  ಅದರಂತೆ ವಿಶ್ವ ಹಿರಿಯ ನಾಗರೀಕರ ದಿನವಾದ ಇಂದು ಹಿರಿಯರನ್ನು ಗೌರವಿಸುವುದರ ಜ್ಯೋತೆಗೆ ಅವರ ಮಾರ್ಗದರ್ಶನದಲ್ಲಿ ಕಿರಿಯ ನಡೆಯಬೇಕು ಎಂದು ಅವರು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.

ಬಳಿಕ ಮಹೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಕಲ್ಯಾಣಿಯನ್ನು ಮತ್ತು ಆರೋಗ್ಯ ಕೇಂದ್ರದ ಸುತ್ತಲೂ ಸ್ವಚ್ಚಗೋಳಿಸಲಾಯಿತು. ಮ್ಯಾರಥಾನ್ ಮೂಲಕ ಗ್ರಾಮದಲ್ಲಿ ಸಂಚರಿಸಿ ಸ್ವಚ್ಚತೆಯ ಜಾಗೃತಿ ನೂಡಿಸಲಾಯಿತು.

ಇದೇ ವೇಳೆಯಲ್ಲಿ ಸ್ವಚ್ಚತಾ ಪ್ರತಿಜ್ಞಾ ವಿಧಿ ಭೋಧಿಸಿದರು.

*ಸ್ವಚ್ಚತಾ ಸೇನಾನಿಗಳಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೋದಲಭಾವಿ, ಯೋಜನಾ ನಿರ್ದೇಶಕ ಜಿ.ಪಂ ಕೊಪ್ಪಳ  ಟಿ. ಕೃಷ್ಣಮೂರ್ತಿ,ತಾ.ಪಂ ಕುಕನೂರ ಕಾರ್ಯನಿರ್ವಾಹಕ ಅಧಿಕಾರಿ  ಸಂತೋಷ ಬಿರಾದರ್ ಪಾಟೀಲ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಹಾಯಕ ನಿರ್ದೇಶಕ  ವೇಂಕಟೇಶ್ ವಂದಾಲ್, ಗ್ರಾಮ ಪಂಚಾಯತಿ ಅಧ್ಯಕ್ಷ ನಿರ್ಮಲಾ ಮಹೇಶ್ ಹಿರೇಮನಿ, ಗ್ರಾಮ ಪಂಚಾಯತಿ ಸದಸ್ಯರು, ಸಹಾಯಕ ನಿರ್ದೇಶಕರು ಗ್ರಾ.ಉ ಮತ್ತು ಪಂಚಾಯತಿ ಪಿಡಿಓ ಶರಣಪ್ಪ ಕೆಳಗಿನಮನಿ, ತಾಲೂಕ ಮಟ್ಟದ ಮತ್ತು ಅಧಿಕಾರಿಗಳು, ಪುರಾತತ್ವ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು ಸ್ವ ಸಹಾಯ ಸಂಘದ ಮಹಿಳೆಯರು, ಐ.ಟಿ.ಐ ಕಾಲೇಜು, ಆದರ್ಶ ಶಾಲೆ, ವಿವಿಧ ಶಾಲಾ ವಿಧ್ಯಾರ್ಥಿಗಳು ಸೇರಿದಂತೆ ನರೇಗಾ ಮತ್ತು ಸ್ವಚ್ಚ ಭಾತರ ಯೋಜನೆಯ ಸಿಬ್ವಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!