ಕನಕಗಿರಿ : ವರ್ಷದ ಮೊದಲ ಮಳೆಯಿಂದ ಇಳೆ ತಂಪಾಗಿದ್ದು, ಈ ಮಳೆಯಿಂದ ಕೆಲವು ಕಡೆಗಳಲ್ಲಿ ತಂಪಾಗಿದ್ದರೆ, ಇನ್ನ ಕೆಲವೆಡೆ ಅನಾಹುತವೇ ಸೃಷ್ಟಿಮಾಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಿಡಿಲ ಬಡಿತಕ್ಕೆ ದೇವಾಲಯದ ಮುಖ್ಯ ಗೋಪುರವೇ ಕುಸಿದು ಬಿದ್ದ ಘಟನೆ ನಡೆದಿದೆ.

ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದ ಗ್ರಾಮದೇವತೆಯಾದ ದುರ್ಗಾದೇವಿ ದೇವಾಲಯದ ಮುಖ್ಯ ಗೋಪುರವು ಅಬ್ಬರದ ಮಳೆಯ ಜೊತೆಗೆ ಸಿಡಿಲ ಬಡಿತಕ್ಕೆ ಕುಸಿದು ಬಿದ್ದ ಘಟನೆ ನಡೆದಿದೆ. ಈ ಪರಿಣಾಮ ಅಲ್ಲೆ ಪಕ್ಕದ ಮನೆಯ ಮುಂದೆ ಆಡುತ್ತಿದ್ದ ಬಾಲಕಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.