ಉತ್ತರ ಭಾರತವು ಅಕ್ಷರಶಃ ಜಲದಿಗ್ಭಂದನವಾಗಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಇದರಲ್ಲಿ ಅನೇಕ ಸಾವನ್ನಪ್ಪಿದ್ದು, ಹಲವಾರು ಜನರು ಶೂರು ಕಳೆದುಕೊಂಡಿದ್ದಾರೆ. ಇದೀಗ ಹರಿಯಾಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಯಮುನಾ ನದಿಯೂ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದೆ.
ಇದರಿಂದ ಅನೇಕ ನಗರಗಳು ಜಲಪ್ರಳಯವಾಗುವ ಸಾದ್ಯತೆಯಿದ್ದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇದೀಗ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರ ಅಂಬಾಲಾದ ನಿವಾಸವು ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಜಲಾವೃತವಾಗಿದ್ದು, ಇದರ ವಿಡಿಯೋ ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ.