BIG NEWS : ಕೇಂದ್ರ ಬಜೆಟ್‌ 2026 : ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ..! : ಮಾಜಿ ಸಚಿವ ಹಾಲಪ್ಪ ಏನ್ ಹೇಳಿದ್ರು ಗೊತ್ತಾ?

You are currently viewing BIG NEWS : ಕೇಂದ್ರ ಬಜೆಟ್‌ 2026 : ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ..! : ಮಾಜಿ ಸಚಿವ ಹಾಲಪ್ಪ ಏನ್ ಹೇಳಿದ್ರು ಗೊತ್ತಾ?

BIG NEWS : ಕೇಂದ್ರ ಬಜೆಟ್‌ 2026 : ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯೆ ..! : ಮಾಜಿ ಸಚಿವ ಹಾಲಪ್ಪ ಏನ್ ಹೇಳಿದ್ರು ಗೊತ್ತಾ?

PV ನ್ಯೂಸ್‌ :

ಪ್ರಜಾವೀಕ್ಷಣೆ ಡಿಜಿಟಲ್‌ ಡೆಸ್ಕ್‌ : 2026ರ ಕೇಂದ್ರದ ಬಜೆಟ್ ನಲ್ಲಿ ದೇಶದ ಮುಂದಿನ ಭವಿಷ್ಯದ ಬಗ್ಗೆ ಯೋಜನೆಗಳಿಲ್ಲ, ಯಾವುದೇ ಸ್ಪಷ್ಟ ಯೋಜನೆಗಳನ್ನು ದೇಶಕ್ಕೆ ನೀಡಿಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಕೇಂದ್ರ ಬಜೆಟ್‌ 2026 ಈ ಕುರಿತು ಪ್ರಜಾವೀಕ್ಷಣೆ ಡಿಜಿಟಲ್‌ ಮಾಧ್ಯಮಕ್ಕೆ ಪ್ರತಿಕ್ರಿಯೇ ನೀಡಿದ ಅವರು, ‘ನಿರುದ್ಯೋಗ, ಕೃಷಿ, ಶಿಕ್ಷಣ, ನೀರಾವರಿ, ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿಲ್ಲ. 3 AIMS ಕೇಂದ್ರಗಳನ್ನು ( ಏಮ್ಸ್ ಗಳನ್ನು) ಸ್ಥಾಪನೆ ಮಾಡುತ್ತಿದ್ದು, ಮೂರು ಉತ್ತರ ಭಾರತದಲ್ಲಿ ಸ್ಥಾಪನೆ ಆಗುತ್ತಿದೆ. ಕರ್ನಾಟಕದ ರಾಯಚೂರಿಗೆ ಏಮ್ಸ್ ಮಂಜೂರು ಮಾಡಿರುವುದಿಲ್ಲ. ಹಿಂದುಳಿದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಹಣ ನೀಡಿರುವುದಿಲ್ಲ , ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡಿಲ್ಲ, ಅನ್ಯಾಯ ಮಾಡಿದ್ದಾರೆ. ಹೈ ಸ್ಪೀಡ್ ರೈಲ್ ಕಾರಿಡಾರ್ ಅನ್ನು ಬೆಂಗಳೂರು – ಮುಂಬೈಗೆ ಮಾಡಬೇಕಾಗಿತ್ತು, ಇದರಿಂದ ಬೆಂಗಳೂರು ಮುಂಬೈನಲ್ಲಿ ವ್ಯಾಪಾರ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು ಎಂದರು.

ಪ್ರತಿವರ್ಷ ಕೇಂದ್ರ ಸರ್ಕಾರ ಸಾಲವನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿದ್ದೆ. ವರ್ಷ 2025 -26ರಲ್ಲಿ ರೂ. 15,68,958ಕೋಟಿ ಸಾಲ ತೆಗೆದುಕೊಂಡಿದ್ದಾರೆ. 2026-27 ವರ್ಷಕ್ಕೆ ರೂ. 17,20,000 ಕೋಟಿಗಳನ್ನು ಸಾಲ ತೆಗೆದುಕೊಳ್ಳುತ್ತಿದ್ದಾರೆ. ಸಾಲದ ಪ್ರಮಾಣ ದೇಶದ ಜಿಡಿಪಿಗೆ 56% ಇದೆ. ಕೇಂದ್ರ ಸರ್ಕಾರ ತಾನೇ ಮಾಡಿದ ಕಾನೂನನ್ನು ಸತತವಾಗಿ ಉಲ್ಲಂಘಿಸುತ್ತಿದೆ. fiscal deficit ಕೊರತೆ ಪ್ರತಿ ವರ್ಷ ಜಾಸ್ತಿ ಆಗುತ್ತಿದೆ. 2025- 26ರಲ್ಲಿ ರೂ.15,58,492 ಕೋಟಿ ಗಳಾಗಿದ್ದು 2026 -27ಕ್ಕೆ ರೂ.16,95,678 ಕೋಟಿ ಗಳಾಗಿದೆ. ಇದರಿಂದ ಸ್ಪಷ್ಟವಾಗಿ ನಮಗೆ ಗೊತ್ತಾಗುತ್ತದೆ, fiscal deficit ಸಾಕಷ್ಟು ಪ್ರಮಾಣದಲ್ಲಿ (ವಿತ್ತೀಯ ಕೊರತೆ) ಹೆಚ್ಚಾಗುತ್ತಾ ಹೋಗುತ್ತಿದೆ ಎಂದು ಸವಿವರವಾಗಿ ತಿಳಿಸಿದರು.

ಕೇಂದ್ರ ಬಜೆಟ್‌ 2026 ಆಶಾದಾಯಕ ಬಜೆಟ್ : ಮಾಜಿ ಸಚಿವ ಹಾಲಪ್ಪ ಆಚಾರ್!


“ಈ ಬಾರಿಯ ಕೇಂದ್ರ ಬಜೆಟ್ ಅತ್ಯಂತ ವಿಶ್ವಾಸ ಹಾಗೂ ತೃಪ್ತಿದಾಯಕವಾಗಿದೆ. ಯುವಕರ, ಮಹಿಳೆಯರಿಗೆ, ಗ್ರಾಮೀಣಾಭಿವೃದ್ಧಿ ಹಾಗೂ ರೈತರಿಗೆ ತುಂಬಾ ಅನುಕೂಲವಾದ ಬಜೆಟ್ ಇದಾಗಿದೆ. ರಾಜ್ಯ ಸರ್ಕಾರಕ್ಕೆ ಉತ್ತಮ ತೃಪ್ತಿದಾಯಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರದ ಮೇಲೆ ಗೂಬೆಯನ್ನು ಕೂರಿಸದೆ ರಾಜ್ಯ ಸರ್ಕಾರ ಅದನ್ನು ಸರಿಯಾಗಿ ಬಳಕೆ ಮಾಡಬೇಕಿದೆ”

Leave a Reply

error: Content is protected !!