PV NEWS EXCLUSIVE | ಕುಕನೂರು : ಗುದ್ನೇಶ್ವರ ಮಠದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಬಿಜೆಪಿ ತೀವ್ರ ವಿರೋಧ! : “ನಿರ್ಧಾರ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ” BJP ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಎಚ್ಚರಿಕೆ!
PV NEWS EXCLUSIVE | ಕುಕನೂರು : ಗುದ್ನೇಶ್ವರ ಮಠದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಬಿಜೆಪಿ ತೀವ್ರ ವಿರೋಧ! : “ನಿರ್ಧಾರ ಹಿಂಪಡೆಯಿರಿ, ಇಲ್ಲ ಉಗ್ರ ಹೋರಾಟ ಎದುರಿಸಿ” BJP ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಎಚ್ಚರಿಕೆ!
ಕುಕನೂರು, ಜು. 21 (PV NEWS ಕನ್ನಡ 24×7): ಕುಕನೂರು ತಾಲೂಕಿನ ಗುದ್ನೇಪ್ಪನಮಠ ಗ್ರಾಮದ ಐತಿಹಾಸಿಕ ಶ್ರೀಗುದ್ನೇಶ್ವರ ದೇವಸ್ಥಾನ ಹಾಗೂ ಮಠಕ್ಕೆ ಸೇರಿದ ಭೂಮಿಯಲ್ಲಿ ರಾಜ್ಯ ಸರ್ಕಾರ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿರುವ ಕ್ರಮವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ, ಧಾರ್ಮಿಕ ದತ್ತಿಗೆ ಸೇರಿದ ಪವಿತ್ರ ಭೂಮಿಯಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕ್ರಮವಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಸ್ವಂತ ಜಾಗಗಳು ಲಭ್ಯವಿದ್ದರೂ ಉದ್ದೇಶಪೂರ್ವಕವಾಗಿ ಮಠದ ಭೂಮಿಯನ್ನೇ ಆಯ್ಕೆ ಮಾಡಿರುವುದು ಸಮಂಜಸವಲ್ಲ. ಅಲ್ಲದೆ, ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಮೇಲ್ಮನವಿ ಪ್ರಕ್ರಿಯೆಯೂ ನಡೆಯುತ್ತಿರುವ ಸಂದರ್ಭದಲ್ಲಿ ಭೂಮಿ ಪೂಜೆ ನಡೆಸಿರುವುದು ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಗೆ ಅಪಚಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ರೈತರು ಹಾಗೂ ಮಠದ ಸೇವಾದಾರರಿಗೆ ಅನ್ಯಾಯವಾಗುವ ರೀತಿಯಲ್ಲಿ ಹೊಸ ನಕ್ಷೆಗಳನ್ನು ಸೃಷ್ಟಿಸಿ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಪ್ರಕಾರ ದೇವಸ್ಥಾನ ಮತ್ತು ಮಠಕ್ಕೆ ಸೇರಿದ ಭೂಮಿಯನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕಿದ್ದು, ಮಠದ ಭೂಮಿಯನ್ನು ಅದರ ಮೂಲ ಸ್ವರೂಪದಲ್ಲೇ ಉಳಿಸಿ, ಪ್ರಜಾಸೌಧ ನಿರ್ಮಾಣದ ನಿರ್ಧಾರವನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲದಿದ್ದರೆ, ಮಠದ ಪೂಜ್ಯರು, ಶರಣರು, ಭಕ್ತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಎಚ್ಚರಿಕೆ ನೀಡಿದ್ದಾರೆ.
“ಶ್ರೀ ಗುದ್ನೇಶ್ವರ ಮಠವು ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯ ಸಂಕೇತವಾಗಿದೆ. ಮಠದ ವಸ್ತುಸ್ಥಿತಿಯನ್ನು ಅರಿತು ಹೋರಾಟಕ್ಕೆ ಸದ್ಧಾಂತಿಕ ಹಾಗೂ ನೈತಿಕ ಬೆಂಬಲ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ್ ಗುಳಗಣ್ಣವರ ಅವರ ನಿಲುವು ಶ್ಲಾಘನೀಯ. ಮಠದ ಭೂಮಿ ಮತ್ತು ಧಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ ಕಾನೂನುಬದ್ಧವಾಗಿ ಮುಂದುವರಿಯಲಿದ್ದು, ಬೆಂಬಲ ಸೂಚಿಸಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು,”