You are currently viewing BREAKING : ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿಗೆ ಇನ್ನು ಅಲೆದಾಟ ಬೇಡ!, ಕೊಪ್ಪಳ ಜಿಲ್ಲೆಯಲ್ಲಿ 31 ಆಧಾರ್ ಕೇಂದ್ರಗಳು ಸಜ್ಜು!

BREAKING : ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿಗೆ ಇನ್ನು ಅಲೆದಾಟ ಬೇಡ!, ಕೊಪ್ಪಳ ಜಿಲ್ಲೆಯಲ್ಲಿ 31 ಆಧಾರ್ ಕೇಂದ್ರಗಳು ಸಜ್ಜು!

BREAKING : ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಚೀಟಿ ಇ-ಕೆವೈಸಿಗೆ ಬಿಗ್ ಅಪ್‌ಡೇಟ್! : ಇ-ಕೆವೈಸಿಗೆ ಇನ್ನು ಅಲೆದಾಟ ಬೇಡ! ಕೊಪ್ಪಳ ಜಿಲ್ಲೆಯಲ್ಲಿ 31 ಆಧಾರ್ ಕೇಂದ್ರಗಳು ಸಜ್ಜು!

ಪಡಿತರ ಚೀಟಿ ಇ-ಕೆವೈಸಿಗಾಗಿ ಬಯೋಮೆಟ್ರಿಕ್ ಅಪ್‌ಡೇಟ್‌; ತಾಲೂಕುವಾರು ಕೇಂದ್ರಗಳ ವಿವರ ಪ್ರಕಟ

ಕೊಪ್ಪಳ, ಸೆ. 28: ಪಡಿತರ ಚೀಟಿಯ ಇ-ಕೆವೈಸಿ (e-KYC) ಪ್ರಕ್ರಿಯೆಗಾಗಿ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಸೇರಿದಂತೆ ವಿವಿಧ ಆಧಾರ್ ಸೇವೆಗಳನ್ನು ಪಡೆಯಲು ಸಾರ್ವಜನಿಕರು ದೂರದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಆಧಾರ್ ಕೇಂದ್ರಗಳ ವಿವರವನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ಜಿಲ್ಲೆಯಲ್ಲಿ ಒಟ್ಟು 31 ಆಧಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ತಮ್ಮ ಸಮೀಪದ ಕೇಂದ್ರಗಳಿಗೆ ತೆರಳಿ ಅಗತ್ಯ ಸೇವೆಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ತಾಲೂಕುವಾರು ಆಧಾರ್ ಕೇಂದ್ರಗಳು

ಕೊಪ್ಪಳ ತಾಲೂಕು – 7 ಕೇಂದ್ರಗಳು:

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 2, ತಹಶೀಲ್ದಾರ್ ಕಚೇರಿಯಲ್ಲಿ 1, ಕೇಂದ್ರ ಬಸ್ ನಿಲ್ದಾಣದ ಸಮೀಪದ ಮಾಲತೇಶ್ ಹೋಟೆಲ್ ಹಿಂಭಾಗದ ಕಾಮನ್ ಸರ್ವಿಸ್ ಸೆಂಟರ್‌ನಲ್ಲಿ 1, ಹೆಡ್ ಪೋಸ್ಟ್ ಆಫೀಸ್‌ನಲ್ಲಿ 1, ಬಿಎಸ್‌ಎನ್‌ಎಲ್ ಕಚೇರಿ ಮತ್ತು ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 1 ಹಾಗೂ ಅಳವಂಡಿ ಹೋಬಳಿಯ ನಾಡ ಕಚೇರಿಯಲ್ಲಿ 1 ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಗಂಗಾವತಿ ತಾಲೂಕು – 4 ಕೇಂದ್ರಗಳು:

ತಹಶೀಲ್ದಾರ್ ಕಚೇರಿ, ಹೆಡ್ ಪೋಸ್ಟ್ ಆಫೀಸ್, ಎಪಿಎಂಸಿ ಪೋಸ್ಟ್ ಆಫೀಸ್ ಹಾಗೂ ಮರಳಿ ನಾಡ ಕಚೇರಿಯಲ್ಲಿ ತಲಾ ಒಂದು ಕೇಂದ್ರವಿದೆ.

ಕುಷ್ಟಗಿ ತಾಲೂಕು – 8 ಕೇಂದ್ರಗಳು:

ತಹಶೀಲ್ದಾರ್ ಕಾರ್ಯಾಲಯ, ಹೆಡ್ ಪೋಸ್ಟ್ ಆಫೀಸ್, ಬಸ್ ನಿಲ್ದಾಣದ ಎದುರಿನ ಬಸವ ಕಾಂಪ್ಲೆಕ್ಸ್‌ನ ಕರ್ನಾಟಕ ಒನ್ ಕೇಂದ್ರ, ಹನುಮಸಾಗರ ನಾಡ ಕಚೇರಿ ಹಾಗೂ ಎಸ್‌ಬಿಐನಲ್ಲಿ ತಲಾ ಒಂದು, ತಾವರಗೇರಾ ನಾಡ ಕಚೇರಿಯಲ್ಲಿ ಒಂದು, ತಾವರಗೇರಾ ಪಟ್ಟಣದ ಅಂಬೇಡ್ಕರ್ ವೃತ್ತದ ಸಮೀಪ ಮುದೇನೂರು ರಸ್ತೆಯ ಕರ್ನಾಟಕ ಒನ್ ಕೇಂದ್ರದಲ್ಲಿ ಒಂದು ಹಾಗೂ ಹನುಮನಾಳ ನಾಡ ಕಚೇರಿಯಲ್ಲಿ ಒಂದು ಕೇಂದ್ರವಿದೆ.

ಯಲಬುರ್ಗಾ ತಾಲೂಕು – 3 ಕೇಂದ್ರಗಳು:

ತಹಶೀಲ್ದಾರ್ ಕಾರ್ಯಾಲಯ, ಪೋಸ್ಟ್ ಆಫೀಸ್ ಎದುರಿನ ಕರ್ನಾಟಕ ಒನ್ ಕೇಂದ್ರ ಹಾಗೂ ಪೋಸ್ಟ್ ಆಫೀಸ್‌ನಲ್ಲಿ ತಲಾ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಕಾರಟಗಿ ತಾಲೂಕು – 4 ಕೇಂದ್ರಗಳು:

ಕಚೇರಿ, ಪೋಸ್ಟ್ ಆಫೀಸ್, ನವಲಿ ರಸ್ತೆಯ ವೆಂಕಣ್ಣ ಶೆಟ್ಟಿ ಪ್ಲಾಜಾದ ಕರ್ನಾಟಕ ಒನ್ ಕೇಂದ್ರ ಹಾಗೂ ಸಿದ್ದಾಪುರ ಗ್ರಾಮದ ನಾಡ ಕಚೇರಿ ಎದುರಿನ ಕರ್ನಾಟಕ ಒನ್ ಆಧಾರ್ ಕೇಂದ್ರದಲ್ಲಿ ತಲಾ ಒಂದು ಕೇಂದ್ರವಿದೆ.

ಕನಕಗಿರಿ ತಾಲೂಕು – 2 ಕೇಂದ್ರಗಳು:

ನಾಡ ಕಾರ್ಯಾಲಯ ಮತ್ತು ಪಟ್ಟಣದ ಪೋಸ್ಟ್ ಆಫೀಸ್‌ನಲ್ಲಿ ತಲಾ ಒಂದು ಆಧಾರ್ ಕೇಂದ್ರವಿದೆ.

ಕುಕನೂರು ತಾಲೂಕು – 3 ಕೇಂದ್ರಗಳು:

ತಹಶೀಲ್ದಾರ್ ಕಾರ್ಯಾಲಯ, ಪಟ್ಟಣದ ಎಸ್‌ಬಿಐ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್‌ನಲ್ಲಿ ತಲಾ ಒಂದು ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಗ್ರಾಮ ಒನ್‌ನಲ್ಲೂ ಹಲವು ಸೇವೆ

ಇ-ಕೆವೈಸಿಯ ತುರ್ತು ಸೇವೆಯನ್ನು ಹೊರತುಪಡಿಸಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸ ತಿದ್ದುಪಡಿ ಅಗತ್ಯವಿರುವ ಸಾರ್ವಜನಿಕರು ಜಿಲ್ಲೆಯ 55 ಗ್ರಾಮ ಒನ್ ಕೇಂದ್ರಗಳಲ್ಲಿ ಸೇವೆ ಪಡೆಯಬಹುದಾಗಿದೆ.

ಇದಲ್ಲದೆ, 0ರಿಂದ 5 ವರ್ಷದೊಳಗಿನ ಮಕ್ಕಳ ಆಧಾರ್ ನೋಂದಣಿ ಹಾಗೂ ಮೊಬೈಲ್ ಸಂಖ್ಯೆ ತಿದ್ದುಪಡಿ ಸೇರಿದಂತೆ ಕೆಲವು ಸೇವೆಗಳನ್ನು ಅಂಚೆ ಇಲಾಖೆಯ IPPB ವ್ಯವಸ್ಥೆಯಲ್ಲಿರುವ 101 ಮೊಬೈಲ್ ಕಿಟ್‌ಗಳ ಮೂಲಕ ಪೋಸ್ಟ್‌ಮ್ಯಾನ್ ಅಥವಾ ಡಾಕ್ ಸೇವಕರಿಂದ ಪಡೆಯಬಹುದಾಗಿದೆ.

ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಪಡಿತರ ಚೀಟಿ ಇ-ಕೆವೈಸಿಗಾಗಿ ಸಾರ್ವಜನಿಕರು ಜಿಲ್ಲಾ ಕೇಂದ್ರ ಅಥವಾ ತಹಶೀಲ್ದಾರ್ ಕಚೇರಿಗಳಲ್ಲೇ ಸೇವೆ ಪಡೆಯಬೇಕೆಂಬ ಅಗತ್ಯವಿಲ್ಲ. ತಮ್ಮ ವಾಸಸ್ಥಳಕ್ಕೆ ಸಮೀಪದಲ್ಲಿರುವ ಅಧಿಕೃತ ಆಧಾರ್ ಕೇಂದ್ರಗಳಿಗೆ ತೆರಳಿ ಸೇವೆ ಪಡೆದುಕೊಳ್ಳುವ ಮೂಲಕ ಅನಗತ್ಯ ಅಲೆದಾಟ ಮತ್ತು ಸಮಯದ ವ್ಯರ್ಥವನ್ನು ತಪ್ಪಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

Prajavikshane

Chandru R Bhanapaur

Leave a Reply

error: Content is protected !!