PV ನ್ಯೂಸ್ ಡೆಸ್ಕ್ ಕುಕನೂರು : ಪೊಲೀಸ್ ಇಲಾಖೆಯ ಕುಕನೂರು ಠಾಣೆಯ ವತಿಯಿಂದ ಪಟ್ಟಣದ ವಿದ್ಯಾನಂದ ಗುರುಕುಲ ಶಾಲೆಯಲ್ಲಿ ತಂಬಾಕು ಮುಕ್ತ ಶಾಲೆ ಜಾಗೃತಿ ಕಾರ್ಯಕ್ರಮ ನಡೆಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಠಾಣೆಯ ಎ ಎಸ್ ಐ ನಿರಂಜನ್ ಮೂರ್ತಿ ತಳವಾರ್, ವಿದ್ಯಾರ್ಥಿಗಳು ತಂಬಾಕು, ಹೊಗೆಸೊಪ್ಪು, ಗುಟ್ಕಾ, ಸಿಗರೇಟ್ ನಂತಹ ದುಶ್ಚಟಗಳಿಂದ ದೂರವಿರಬೇಕು. ತಂಬಾಕು ಸೇವೆನೆಯಿಂದ ಅರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದರು.
ಈ ಸಂದರ್ಭದಲ್ಲಿ ಗುರುಕುಲ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ. ವಿ. ಜಹಾಗೀರ್ ದಾರ್, ಪೊಲೀಸ್ ಸಿಬ್ಬಂದಿಗಳಾದ ಮಾರುತಿ, ಗ್ಯಾನೇಶ್, ಶರಣಪ್ಪ, ಇತರರು ಉಪಸ್ಥಿತರಿದ್ದರು.