ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ ರಾಜ್ಯ ಬಜೆಟ್ 2023-24ರ ಸಂಚಿತ ನಿಧಿಯ ಗಾತ್ರ 3,27,747 ಕೋಟಿ ರೂ. ಆಗಿದ್ದು, ಒಟ್ಟು ಸ್ವೀಕೃತ ಆದ ಮೊತ್ತ 3,24,478 ಕೋಟಿ ರೂ. ಆಗಿದೆ. ರಾಜ್ಯ ಸ್ವಸ್ವೀಕೃತಿ 2,38,410 ಕೋಟಿ ರೂ. ಆಗಿದೆ. ಸಾರ್ವಜನಿಕ ಋಣ 85,818 ಕೋಟಿ ರೂ. ಸೇರಿದಂತೆ ಬಂಡವಾಳ ಸ್ವೀಕೃತಿ 86,068 ಕೋಟಿ ರೂ. ಆಗಿದೆ.
ಒಟ್ಟು ವೆಟ್ಟ 3,27,747 ಕೋಟಿ ರೂ. ಆಗಿದೆ. ರಾಜಸ್ವ ವೆಚ್ಚ 2,50,933 ಕೋಟಿ ರೂ. ಆಗಿದ್ದು, ಬಡವಾಳ ವೆಟ್ಟ 54,374 ಕೋಟಿ ರೂ ಹಾಗೂ ಸಾಲ ಮರುಪಾವತಿ 22,441 ಕೋಟಿ ರೂ ಮಾಡಲಾಗಿದೆ ಎಂದರು.
Budget 2023 : ಯಾವ ಇಲಾಖೆಗೆ ಎಷ್ಟು ಕೋಟಿ?
ಮುಖ್ಯಮಂತ್ರಿ ಸಿದ್ಧರಾಮಯ್ಯ 2023-24 ಸಾಲಿನ ಆಯ-ವ್ಯಯವನ್ನು ಇಂದು ವಿಧಾನಸೌಧದಲ್ಲಿ ಮಂಡಿಸಿದ್ದಾರೆ. 3 ಲಕ್ಷ 27 ಸಾವಿರ ಕೋಟಿ ಗಾತ್ರದ ಬಜೆಟ್ ಇದಾಗಿದೆ. ಯಾವ-ಯಾವ ಇಲಾಖೆಗಳಿಗೆ ಎಷ್ಟೆಷ್ಟು ಅನುದಾನವನ್ನು ಮೀಸಲಿರಿಸಿದೆ ಎಂಬುದರ ಬಗ್ಗೆ ಪಟ್ಟಿ ಇಂತಿದೆ.
1. ಶಿಕ್ಷಣ ಇಲಾಖೆಗೆ- 37,587 ಕೋಟಿ ಅನುದಾನ ಮೀಸಲು
2. ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಗೆ 3,024 ಕೋಟಿ ನೀಡಲಾಗಿದೆ.
3. ನಗರಾಭಿವೃದ್ಧಿ ಇಲಾಖೆ & ನೀರಾವರಿ ಇಲಾಖೆ 19,044 ಕೋಟಿ ಮೀಸಲು
4. ಲೋಕೋಪಯೋಗಿ ಇಲಾಖೆ 10,143 ಕೋಟಿ ಮೀಸಲು
5. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 24,166 ಕೋಟಿ
6. ಇಂಧನ ಇಲಾಖೆ 22,773 ಕೋಟಿ ಮೀಸಲಿರಿಸಿದೆ.
7. ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್ ಇಲಾಖೆ 18,038 ಕೋಟಿ ವೆಚ್ಚವಿರಿಸಿದೆ
8. ಕಂದಾಯ ಇಲಾಖೆ 16,167 ಕೋಟಿ
9. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ 14,950 ಕೋಟಿ ಮೀಸಲು
10. ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ ಮೀಸಲಿಡಲಾಗಿದೆ
11. ಒಳಾಡಳಿತ & ಸಾರಿಗೆ ಇಲಾಖೆಗೆ 16,638 ಕೋಟಿ ಮೀಸಲಿಟ್ಟಿದೆ
12. ಆಹಾರ & ನಾಗರಿಕ ಸರಬರಾಜು ಇಲಾಖೆಗೆ 10,460 ಕೋಟಿ ಮೀಸಲು
13. ಇತರೆ 1,09,639 ಲಕ್ಷ ಕೋಟಿ ರೂಪಾಯಿ ಮೀಸಲು