ಮುದಗಲ್ಲ ವರದಿ..
ಮುದಗಲ್ಲ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ..
ಮುದಗಲ್ ಪಟ್ಟಣ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣವನ್ನು ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಶಿವಶಂಕರಗೌಡ ರವರು ನೆರವೇರಿಸಿದರು ನಂತರ ಮಾತನಾಡಿದ ಮುದಗಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅದ್ಯಕ್ಷರಾದ ಶಿವಶಂಕರಗೌಡ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತ ಮಿಗಿಲು ಎಂಬ ಮಹಾಕಾವ್ಯ ರಾಮಾಯಣದ ವಾಕ್ಯ ನಮಗೆಲ್ಲರಿಗೂ ಮನವರಿಕೆಯಾಗಬೇಕು. ಯುವಕರು ಸ್ವಾತಂತ್ರ್ಯ ಸಂಗ್ರಾಮದ ಸಾಹಸ ಕಥೆಗಳನ್ನು ಮತ್ತು ಚರಿತ್ರೆಯನ್ನು ಓದಿಕೊಳ್ಳಬೇಕು. ಚೆರಿತ್ರೆ ತಿಳಿಯದವರು ಚರಿತ್ರೆ ನಿರ್ಮಿಸಲಾರರು ಎಂಬುದನ್ನು ಮನನ ಮಾಡಿಕೊಂಡು, ಸೌಹಾರ್ದತೆಯ ದೇಶದ ರಕ್ಷಣೆಗೆ ಮುಂದಾಗಬೇಕು ದೇಶ ಸ್ವಾತಂತ್ರ್ಯ ಗಳಿಸಿದ ಮೇಲೆ ಜನಿಸಿದ ನಮಗೆ ಸ್ವಾತಂತ್ರ್ಯದ ಮಹತ್ವ ತಿಳಿದಿಲ್ಲ. ಸ್ವಾತಂತ್ರ್ಯ ತಂದು ಕೊಡಲು ಜೀವ ತೆತ್ತಿರುವ ತಳಸಮುದಾಯಗಳಿಗೆ ಇಂದಿಗೂ ಮೂಲ ಸವಲತ್ತು ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅದ್ಯಕ್ಷರು ಹಾಗೂ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಪುರಸಭಾ ಸದಸ್ಯರು ವಿವಿಧ ಇಲಾಖೆಯ ನಾಮನಿರ್ದೇಶನ ಸದಸ್ಯರುಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು ಇದ್ದರು
ವರದಿ:- ಮಂಜುನಾಥ ಕುಂಬಾರ