ಮುದಗಲ್ಲ ಪಟ್ಟಣದಲ್ಲಿ ವಿಜೃಂಭಣೆ ಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ..

ಮುದಗಲ್ಲ ವರದಿ..

ಮುದಗಲ್ಲ ಪಟ್ಟಣದಲ್ಲಿ ವಿಜೃಂಭಣೆ ಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಣೆ..

ಮುದಗಲ್ಲ : ಐತಿಹಾಸಿಕ ಪಟ್ಟಣದ ವಿವಿಧ ಸರಕಾರಿ ಕಛೇರಿಯಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.

ಪಟ್ಟಣದ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಸಡಗರ ದಿಂದ ಹಾಗೂ ಸಂಭ್ರಮದಿಂದ ವಿಶೇಷವಾಗಿ ಚಿನ್ನರ ವಿಶೇಷವಾದ ಉಡುಗೆಗಳಿಂದ ಕಂಗೊಳಿಸುತ್ತಿದ್ದರು ಉನ್ನತಿಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳಿಂದ ಧ್ವಜವಂದನೆ ಮನಮೋಹಕ ವಾಗಿತ್ತು .

ಪಟ್ಟಣ ಪುರಸಭೆ ಅಧ್ಯಕ್ಷರಾದ ಮಹಾದೇವಮ್ಮ ಗುತ್ತೆದಾರ ಹಾಗೂ ಸದಸ್ಯರು ಒಳಗೊಂಡು ಹಾಗೂ ಊರಿನ ಗಣ್ಯರು ಸೇರಿದಂತೆ ಮುಖ್ಯಾಧಿಕಾರಿ ಪ್ರಮೀಣ ಕುಮಾರ್ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿಸಿದರುಹಾಗೂ ನಾಡ ಕಾಯಾ೯ಲಯ ಮುದಗಲ್ಲ ಉಪ ತಹಶೀಲ್ದಾರ್ ತುಲುಜಾ ರಾಮ ಸಿಂಗ್ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.

ಹಾಗೂ ಪೋಲಿಸ್ ಠಾಣೆಯಲ್ಲಿ ,ಸರಕಾರಿ ಹಿರಿಯರು ಪ್ರಾಥಮಿಕ ಶಾಲೆ , ಪ್ರೌಢಶಾಲೆ,ಸರಕಾರಿ ಪದವಿ ಪೂರ್ವ ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಮುದಗಲ್ಲ, ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ ಮುದಗಲ್ಲ , ವಿಜಯ ಮಹಾಂತೇಶ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಮುದಗಲ್ಲ,ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಧ್ವಜಾರೋಹಣ ನೆರವೇರಿಸಿದರು..

ಈ ಸಂದರ್ಭದಲ್ಲಿ ಎಸ್ ವಿ ಎಮ್ ಪ್ರೌಢ ಶಾಲೆ ಯ ವಿಧ್ಯಾರ್ಥಿ ಗಳಿಂದ ನೃತ್ಯ ಪ್ರದರ್ಶನವು ಗಮನ ಸೆಳೆಯಿತು.

ವರದಿ: ಮಂಜುನಾಥ ಕುಂಬಾರ

Leave a Reply

error: Content is protected !!