ಮುದಗಲ್ಲ ವರದಿ..
ಕಸ ಸಂಗ್ರಹಣೆಗೆ ಬಕೆಟ್ ವಿತರಣೆ..
ಮುದಗಲ್ಲ :- ಮೂಲದಲ್ಲೇ ಕಸ ವಿಂಗಡಿಸಿ ಸಂಗ್ರಹಿಸುವ ಉದ್ದೇಶದಿಂದ ಪಟ್ಟಣದಲ್ಲಿರುವ ಮನೆಗಳಿಗೆ ತಲಾ ಎರಡು ಕಸ ಸಂಗ್ರಹಣೆ ಬಕೆಟ್‌ಗಳನ್ನು ನೀಡುವ ಕಾರ್ಯಕ್ಕೆ ಮುದಗಲ್ಲ ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮ ಗುತ್ತಿಗೆದಾರ ಸಂಕೇತವಾಗಿ ಚಾಲನೆ ನೀಡಿದರು.
ಪಟ್ಟಣದಲ್ಲಿ ನೈರ್ಮಲ್ಯ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕಸ ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಅನುಕೂಲ ವಾಗುವಂತೆ ಪ್ರತಿ ಮನೆಗೆ ಎರಡು ಬಕೆಟ್‌ಗಳನ್ನು ನೀಡಲಾಗುತ್ತಿದೆ’ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಂಜಾನ್ ಬೀ,ಮುಖ್ಯಾಧಿಕಾರಿ ಪ್ರಮೀಣ ಕುಮಾರ್,ಸದಸ್ಯರಾದ ಹನುಮಂತ ವಾಲ್ಮೀಕಿ, ಜಯಶ್ರೀ ಜೀಡಿ, ಮೈಬುಸಾಬ ಕಡ್ಡಿಪುಡಿ, ಮ್ಯಾನೇಜರ್ ಸುರೇಶ್, ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ, ಬಸವರಾಜ ಮೇಟಿ, ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ