ಪುರಸಭೆ ಅಧ್ಯಕ್ಷ ರಾದ ಮಹಾದೇವಮ್ಮಗುತ್ತೆದಾರ್ ಅಧ್ಯಕ್ಷ ತೆಯಲ್ಲಿ ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ಗುರುವಾರ ನಡೆಯಿತು.
ಮುದಗಲ್ : ಸ್ಥಳೀಯ ಪುರಸಭೆಯಲ್ಲಿ ಗುರುವಾರ ನಡೆದ ಸಾಮನ್ಯ ಸಭೆಯಲ್ಲಿ ಅಧ್ಯಕ್ಷೇ ಮಹಾದೇವಮ್ಮ ಎನ್ ಗುತ್ತೇದಾರ ಹಾಗೂ ಉಪಾಧ್ಯಕ್ಷ ಎಸ್.ಕೆ ಅಜಮೀರ ಬೆಳ್ಳಿಕಟ್ಟ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಂಜಾನಬೀ ಹೆಚ್ ಕವ್ವಾ ನೇತ್ರತ್ವದಲ್ಲಿ ಸಮಾನ್ಯ ಸಭೆ ನಡೆಯಿತು.
ಪುರಸಭೆ ಮುಖ್ಯಾಧಿಕಾರಿ ಪ್ರವೀಣ್ ಬೂಗೂರು ಮಾತನಾಡಿ ಸಾಮನ್ಯ ಸಭೆಯಲ್ಲಿ ಠರಾವುಗಳ ವಿವರ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ಇವರಿಂದ ಅನುಮೋದನೆಗೂಂಡ ವಾಣಿಜ್ಯ ಮತ್ತು ವಾಸದ ಉದ್ದೇಶ ನಿವೇಶನಗಳಿಗೆ ಆಡಳಿತಾತ್ಮಕ ಮಂಜುರಾತಿ ಹಾಗೂ ಮೋಹರಂ ಹಬ್ಬದ ಆಚರಣೆಯಲ್ಲಿ ಪುರಸಭೆಯಿಂದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗಮಿಸಿದ ಭಕ್ತರಿಗೆ ಸಮರ್ಪಕ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಯಾತ್ರಿಕರಿಗೆ ಸಂಚಾರಿ ಶೌಚಾಲಯ ಅತ್ಯಅವಶ್ಯಕತೆ ಸೇರದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹರಾಜು ಪ್ರಕ್ರಿಯೇ ಪಾರದರ್ಶಕತೆಯಿಂದ ಮಾಡಬೇಕು. ಜಿಲ್ಲಧಿಕಾರಿಗಳಿಗೆ 25 ಲಕ್ಷ ರೂ. ಮಂಜುರು ಮಾಡಲು ಮನವಿ ಸಲ್ಲಿಸಿಕೆ, ಪಟ್ಟಣಕ್ಕೆ ಕುಡಿಯುವ ನೀರಿನ ಕ್ರಿಯಾ ಯೋಜನೆ. ಪುರಸಭೆ ಕಾರ್ಯಲಯ ಸಾಮಾಗ್ರಿ ಹಾಗೂ ವಿವಿಧ ಅನುದಾನದಲ್ಲಿ ಜಿಮ್ ಹಾಗೂ ಕೆಟಿಟಿಪಿ ಪೋರ್ಟಲ್ ಟೆಂಡರಗಳಿಗೆ ಅನುಮೋದನೆಗೆ ಸದಸ್ಯರು ಸೂಚಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅಮೀರ ಬೇಗ ಉಸ್ತಾದ, ಗುಂಡಪ್ಪ ಗಂಗಾವತಿ, ಎಸ್. ಆರ್ ರಸೂಲ್, ಹನುಮಂತ ವಾಲ್ಮೀಕಿ, ಶಬ್ಬೀರ ಪಾಷ, ಬಾಬು ಉಪ್ಪಾರ, ಶಿವನಾಗಪ್ಪ, ಶ್ರೀಕಾಂತ ಗೌಡ ಪಾಟೀಲ್ , ಅಮೀನಾ ಬೇಗಂ, ಲಕ್ಮಿಬಾಯಿ ಅಯ್ಯಪ್ಪ, ಮಹಾಲಕ್ಷೀ ಕರಿಯಪ್ಪ ರಾಬೀಯಾ ಬೇಗಂ, ಜಯಶ್ರೀ ಜೀಡಿ ವ್ಯವಸ್ಥಾಪಕ ಸುರೇಶ, ಇಂಜಿನಿಯರ ಪ್ರೀಯಾಂಕ , ನೈರ್ಮಲ್ಯಧಿಕಾರಿ ಆರೀಫ ಹುನ್ನಿಸ್ಸಾ, ಜಿಲಾನಿ ಪಾಷ, ನಿಸ್ಸಾರ ಅಹ್ಮದ್, ಕುಪ್ಪಣ್ಣ, ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು..
ವರದಿ:- ಮಂಜುನಾಥ ಕುಂಬಾರ