LOCAL BREAKING : ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ..!!: ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಪರದಾಟ ..!

You are currently viewing LOCAL BREAKING : ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ..!!: ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಪರದಾಟ ..!

ಪ್ರಜಾ ವೀಕ್ಷಣೆ ಸುದ್ದಿ : 

LOCAL BREAKING : ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧ..!!: ವಿದ್ಯಾರ್ಥಿಗಳು ಸೇರಿ ಪ್ರಯಾಣಿಕರ ಪರದಾಟ ..!


ಕುಕನೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ರಾಜ್ಯಾದ್ಯಂತ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಜನರು ಪರಡಾವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ಕುಕನೂರು ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಖಾಲಿ ಖಾಲಿ ಅನ್ನಿಸುತ್ತಿದ್ದು, ಖಾಸಗಿ ವಾಹನಗಳು ನಿಲ್ದಾಣದ ಹೊರಗಡೆ ಸಾಲಾಗಿ ನಿಂತಿವೆ.

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ಬಿಸಿ ಜೋರಾಗಿದ್ದು, ಇದು ಈಗ ಜಿಲ್ಲೆ-ತಾಲೂಕಾ ಕೇಂದ್ರಗಳಲ್ಲೂ ಮುಂದುವರೆದಿದೆ. ಇದರಿಂದ ಜನರಸಾಮಾನ್ಯರು, ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ ಹೇಳತೀರದಂತಾಗಿದೆ.

 

:ಅಧಿಕಾರಿಗಳ ಆದೇಶಕ್ಕೆ ಕಿಂಚಿತ್ತೂ ಬೆಲೆ ಇಲ್ಲ ಕೊಡದ ಸಾರಿಗೆ ನೌಕರರು :

“ನಮ್ಮ ನಿಗಮದ ಸೇವೆಯು ಸಾರ್ವಜನಿಕ ಉಪಯುಕ್ತ ಸೇವೆ ಆಗಿರುವುದರಿಂದ ಮುಷ್ಕರದಲ್ಲಿ ಪಾಲ್ಗೊಳ್ಳದೇ ಘಟಕದ ಎಲ್ಲಾ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಆದೇಶಿಸಿದೆ. ಮುಷ್ಕರದ ಸಮಯದಲ್ಲಿ ಗೈರು ಹಾಜರಾದರೆ ಮಾನ್ಯ ಕೇಂದ್ರ ಕಛೇರಿಯ ಆದೇಶದಂತೆ “ಕೆಲಸವಿಲ್ಲದಿದ್ದಾಗ ವೇತನವಿಲ್ಲ” ಎಂಬ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮೇಲಿನ ಉಲ್ಲೇಖದಂತೆ ಮಾನ್ಯ ಸೂಕ್ತಾಧಿಕಾರಿಗಳವರು ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿರುತ್ತಾರೆ. ಅದರಂತೆ ಕರ್ತವ್ಯಕ್ಕೆ ಹಾಜರಾಗಲು ಈ ಮೂಲಕ ಆದೇಶಿಸಿದೆ” ಎಂದು ಘಟಕದ ವ್ಯವಸ್ಥಾಪಕರು ಸೂಚನಾ ಪತ್ರ ಹೊರಡಿಸಿದ್ದಾರೆ.

ಈ ಸೂಚನಾ ಪತ್ರಕ್ಕೆ ಸಾರಿಗೆ ನೌಕರರು ಕಿಂಚಿತ್ತೂ ಬೆಲೆ ಕೊಡದೆ ಕರ್ತವ್ಯಕ್ಕೆ ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳು ಇಂದು ಬರ್ಜರಿ ಖಮಾಯಿ ಮಾಡಿಕೊಳ್ಳುತ್ತದೆ. ಅದರಂತೆ ಇಂದು ಬೆಳ್ಳಂಬೆಳಗ್ಗೆಯಿಂದ ಖಾಸಗಿ ಕ್ರೂಸರ್‌ ವಾಹನಗಳು ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿವೆ ಎಂಬ ಮಾಹಿತಿ ಇದೆ.

Leave a Reply

error: Content is protected !!