BREAKING : ಹೋರಾಟದ ಸ್ವರೂಪ ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆ..!!

You are currently viewing BREAKING : ಹೋರಾಟದ ಸ್ವರೂಪ ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆ..!!

ಪ್ರಜವಿಕ್ಷಣೆ ಸುದ್ದಿ ಜಾಲ 

BREAKING : ಹೋರಾಟದ ಸ್ವರೂಪ ಪಡೆದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಚುನಾವಣೆ..!!

ಕುಕನೂರ : ಇಂದು ಪಟ್ಟಣ ಎಪಿಎಂಸಿ ಆವರಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ಬೆಳಗ್ಗೆಯಿಂದಲೇ ಪರ ಮತ್ತು ವಿರೋಧವಾಗಿ ನಡೆದಿದೆ.

ಈ ಚುನಾವಣೆಯಲ್ಲಿ ಮುಖ್ಯವಾಗಿ ಅರ್ಹ ಮತ್ತು ಅನರ್ಹ ಮತ ಪಟ್ಟಿಯ ಬಗ್ಗೆ ಅಧಿಕ ಚರ್ಚೆಯು ಆಗಿದೆ.

ಕೆಲ ಅನರ್ಹ ಮತದಾರರು ಕೋರ್ಟ್ ಮೂಲಕ ಅರ್ಹ ಮತದಾರಾಗಿ ಮತ್ತೊಂದು ಪಟ್ಟಿಯನ್ನು ತಂದಿರುತ್ತಾರೆ.

ನಂತರ ಚುನಾವಣಾ ಅಧಿಕಾರಿಗಳು ಕೋರ್ಟು ಮೂಲಕ ಬಂದ ಮತದಾರರ ಪಟ್ಟಿಯಲ್ಲಿರುವರಿಗೆ ಪ್ರತ್ಯೇಕ ಚುನಾವಣೆ ನಡೆಸಿರುತ್ತಾರೆ.

ಸಂಜೆ ನಾಲ್ಕು ಗಂಟೆಗೆ ಮತದಾನ ಮುಕ್ತಾಯವಾದಾಗ ಚುನಾವಣೆಯ ಪ್ರಕ್ರಿಯೆ ಪ್ರಕಾರ ಫಲಿತಾಂಶ ಘೋಷಣೆಯಾಗಬೇಕಿತ್ತು. ಆದರೆ ಮೂಲ ಮತದಾರರು ಮತ ಚಲಾವಣೆ ಮಾಡಿದ ಮತ ಪೆಟ್ಟಿಗೆ ಹಾಗೂ ಅನರ್ಹರು ಕೋರ್ಟು ಮೂಲಕ ತಂದ ಪಟ್ಟಿಯ ಮತದಾನದ ಮತ ಪೆಟ್ಟಿಗೆ ಪ್ರತ್ಯೇಕವಾಗಿದ್ದರಿಂದ ಮತ ಎಣಿಕೆ ಮಾಡುವಲ್ಲಿ ಗೊಂದಲ ಉಂಟಾಯಿತು.

ಈ ವೇಳೆ ಪಕ್ಷ ಬೆಂಬಲಿತರಿಂದ ವಾದ ಪ್ರತಿವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಭದ್ರ ಪಡಿಸಿದ ಮತ ಪೆಟ್ಟಿಗೆಗಳನ್ನು ಪಟ್ಟಣದ ಎಪಿಎಂಸಿ ಆವರಣದ ಆರ್.ಡಿ.ಸಿ ಬ್ಯಾಂಕ್ ನ ಲಾಕರ್ ನಲ್ಲಿ ಭದ್ರ ಪಡಿಸಿದರು.

ಆದರೆ ಇದಕ್ಕೆ ಒಪ್ಪದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಎಪಿಎಂಸಿ ಆವರಣದಲ್ಲಿ ಪಕ್ಷದ ಧ್ವಜ ಹಿಡಿದು ಪೊಲೀಸರ ವಿರುದ್ಧ ಹಾಗೂ ಚುನಾವಣೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಈ ವೇಳೆ ಚುನಾವಣಾ ಅಧಿಕಾರಿ ಫಲಿತಾಂಶ ಘೋಷಣೆ ಮಾಡದೇ ಇರುವುದಕ್ಕೆ ಸಮರ್ಥನೆ ಮಾಡಿಕೊಳ್ಳಲು ಮುಂದಾದಾಗ ಇದಕ್ಕೆ ಒಪ್ಪದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಮನಬಂದಂತೆ ಬೈದು, ಅಧಿಕಾರಿಗಳು ಪಕ್ಷದ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ ಘೋಷಣೆಯಾಗುವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಧರಣಿ ಕುಳಿತುಕೊಂಡಿದ್ದಾರೆ.

Leave a Reply

error: Content is protected !!