You are currently viewing BREAKING : ಗಂಗಾವತಿಯಲ್ಲಿ ಬಿಜೆಪಿ ಅಧ್ಯಕ್ಷನ ಬರ್ಬರ ಹತ್ತೆ..!

BREAKING : ಗಂಗಾವತಿಯಲ್ಲಿ ಬಿಜೆಪಿ ಅಧ್ಯಕ್ಷನ ಬರ್ಬರ ಹತ್ತೆ..!

ಪ್ರಜಾ ವೀಕ್ಷಣೆ ಸುದ್ದಿ :

BREAKING : ಗಂಗಾವತಿಯಲ್ಲಿ ಬಿಜೆಪಿ ಅಧ್ಯಕ್ಷನ ಬರ್ಬರ ಹತ್ತೆ..!

ಗಂಗಾವತಿ : ಭತ್ತದ ನಾಡೆಂದೇ ಪ್ರಖ್ಯಾತಿಗೊಂಡಿರುವ ಗಂಗಾವತಿ ಇತ್ತೀಚಿಗೆ ಕೆಲವು ವರ್ಷಗಳಿಂದ ಕುಖ್ಯಾತಿಗಳಿಂದ ಬೇಸತ್ತುಹೋಗಿದೆ. ಇದೀಗ ನಗರದಲ್ಲಿ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಗಂಗಾವತಿ ನಗರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಈ ಘಟನೆ ನಗರದ ರಾಯಚೂರು ರಸ್ತೆಯ ರಿಲಾಯನ್ಸ್ ಮಾರ್ಟ್ ಹತ್ತಿರ ನಿನ್ನೆ (ಬುಧವಾರ) ತಡರಾತ್ರಿ ನಡೆದಿದೆ.

ಕೆ. ವೆಂಕಟೇಶ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಮೃತನು ತಡರಾತ್ರಿ ಒಂದು ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಊಟ ಮುಗಿಸಿಕೊಂಡು ಬೈಕ್ ನಲ್ಲಿ ಗಂಗಾವತಿಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಹಿಂಬಾಲಿಸಿ ಕೊಂಡು ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ ಎಂದು ಮಾಹಿತಿ ಇದೆ.

ಕೊಲೆಯಾದ ವ್ಯಕ್ತಿಯು ಯುವಕ ಮಾಜಿ ಶಾಸಕ ಪರಣ್ಣ ಮುನವಳ್ಳಿ ಅವರ ಆಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

 ಘಟನಾ ಸ್ಥಳಕ್ಕೆ ಕೊಪ್ಪಳ ಎಸ್.ಪಿ ಡಾ. ರಾಮ ಅರಸಿದ್ದಿ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದರು.

ವರದಿ : ವಿಶ್ವನಾಥ ಪಟ್ಟಣಶೆಟ್ಟಿ

Prajavikshane

Chandru R Bhanapaur

Leave a Reply

error: Content is protected !!