PV NEWS : ಆಗಸ್ಟ್‌ನಲ್ಲೇ ಎರಡು ತಿಂಗಳ ಪಡಿತರ ವಿತರಣೆ : ಪಡಿತರ ಚೀಟಿದಾರರಿಗೆ ಒಟ್ಟಿಗೆ ಆಗಸ್ಟ್–ಸೆಪ್ಟೆಂಬರ್ ತಿಂಗಳ ಧಾನ್ಯ; ಎರಡು ಬಾರಿ ಬಯೋಮೆಟ್ರಿಕ್ ಕಡ್ಡಾಯ!
PV NEWS ಕನ್ನಡ 24×7 |
ಕೊಪ್ಪಳ, ಆ.12: ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಎನ್‌ಎಫ್‌ಎಸ್‌ಎ (NFSA) ಅಕ್ಕಿ ಹಾಗೂ ಇತರೆ ಪಡಿತರ ಧಾನ್ಯಗಳನ್ನು ಆಗಸ್ಟ್ ತಿಂಗಳಲ್ಲೇ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿದಾರರಿಗೆ ಒಟ್ಟಿಗೆ ವಿತರಿಸಲಾಗುತ್ತಿದೆ.
ಎರಡು ತಿಂಗಳ ಪಡಿತರವನ್ನು ಒಂದೇ ಬಾರಿ ವಿತರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಂದ ಎರಡು ಬಾರಿ ಬಯೋಮೆಟ್ರಿಕ್ (ಬೆರಳಚ್ಚು) ಪಡೆಯಲಾಗುತ್ತದೆ. ಆದ್ದರಿಂದ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ನಿಗದಿತ ಪ್ರಮಾಣದ ಎರಡೂ ತಿಂಗಳ ಪಡಿತರವನ್ನು ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
